ದೇವರ ಅಸ್ತಿತ್ವವನ್ನು ವೇದಗಳ ಶ್ರೇಷ್ಠತೆಯನ್ನು ನಿರಾಕರಿಸಿದ ಬುದ್ದನನ್ನೇ `ಅವತಾರ ಪುರುಷ ಎಂದು ಬಿಂಬಿಸಲಾಯಿತು. ಪುರೋಹಿತಶಾಹಿಯನ್ನು, ಜಾತಿ ಪದ್ಧತಿಯನ್ನು ವಿರೋಧಿಸಿದ ಬಸವಣ್ಣನನ್ನು`ನಂದಿ ಅವತಾರ ಎಂದು ಬಿಂಬಿಸಿ ಪೂಜಿಸುವಂತೆ ಮಾಡಲಾಗಿದೆ. ತಾನೊಬ್ಬ ನಾಸ್ತಿಕ ಎಂದು ಘೋಷಿಸಿಕೊಡ ಭಗತ್ ಸಿಂಗ್ ಅವರ ಹಾಗೂ ಹಿಂದೂ ಆಗಿ ಹುಟ್ಟಿದ್ದರೂ ಹಿಂದೂ ಆಗಿ ಸಾಯಲಾರೆ ಎಂದು ಘೋಷಿಸಿದ್ದ ಡಾ|| ಅಂಬೇಡ್ಕರ್ ಅವರ ಭಾವ ಚಿತ್ರಗಳನ್ನು ಹಾಕಿಕೊಂಡು ಸಂಘಪರಿವಾರದ ಸಂಘಟನೆಗಳು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರ ವಿಚಾರಗಳ ಕುರಿತು ನಮ್ಮ ವಸ್ತುನಿಷ್ಠವಾದ ಅಧ್ಯಯನ ಹೆಚ್ಚಾಗಬೇಕಾಗಿದೆ.
ಮಾನವ ಸಮಾಜವು ಸರದಿಯ ಪ್ರಕಾರ ನಾಲ್ಕು ವರ್ಣಗಳಿಂದ ಆಳಲ್ಪಡುತ್ತಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ….. ಮೊದಲನೆಯ ಮೂರಕ್ಕೂ ತಮ್ಮ ತಮ್ಮ ಯುಗಗಳಿದ್ದವು. ಈಗ ಕಡೆಯದರ ಕಾಲ. ಅದು ಬರಲೇಬೇಕು. ಅದನ್ನೂ ಯಾರೂ ತಡೆಯಲಾರರು! ಹೀಗೊಂದು ಭವಿಷ್ಯವಾಣಿ ನುಡಿದಿದ್ದವರು ಬೇರೆ ಯಾರು ಅಲ್ಲ. ಅವರೇ ಸ್ವಾಮಿ ವಿವೇಕಾನಂದರು.
ಇದೇ ಜನವರಿ 12 ರಂದು ದೇಶದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆ ಆರಂಭವಾಗಿದೆ. 2013 ರ ಜನವರಿ 12ರವರೆಗೂ ಅದು ನಡೆಯಲಿದೆ. ಸ್ವಾಮಿ ವಿವೇಕಾನಂದ ಎಂದೇ ವಿಶ್ವಕ್ಕೆ ಚಿರಪರಿಚಿತರಾದ ಕಲ್ಕತ್ತಾದ ನರೇಂದ್ರನಾಥ ದತ್ತ ಭಾರತದ ಓರ್ವ ಹೆಮ್ಮೆಯ ಪುತ್ರ. ಅವರ ಎಲ್ಲ ವಿಚಾರಗಳ ಬಗ್ಗೆ ಸಹಮತ ಸಾಧ್ಯವಾಗಲಿಕ್ಕಿಲ್ಲ. ಆದರೆ ಅವರು ಬಲವಾಗಿ ಪ್ರತಿಪಾದಿಸುತ್ತಿದ್ದ ಪರಮತ ಸಹಿಷ್ಣುತೆ ನಮಗೆ ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ್ತವಾಗಿದೆ. ಸ್ವಾಮಿ ವಿವೇಕಾನಂದರು ವಿಶ್ವಕ್ಕೇ ಪರಿಚಯಿಸಿದ ಹಿಂದೂ ಧರ್ಮವೇ ಬೇರೆ, ಇಂದು ಆರೆಸ್ಸೆಸ್ ಪ್ರತಿಪಾದಿಸುತ್ತಿರುವ ಹಿಂದುತ್ವವೇ ಬೇರೆ ಎಂಬುದನ್ನು ಕಾಣಲು ಸಾಧ್ಯವಾದಾಗ ನಮಗೆ ಸ್ವಾಮಿ ವಿವೇಕಾನಂದರೇ ಬೇರೆ, ಉಡುಪಿಯ ಇಂದಿನ ಪೇಜಾವರ ಸ್ವಾಮಿಗಳಂತಹವರೇ ಬೇರೆ ಎಂಬುದು ಸ್ಪಷ್ಟವಾಗುತ್ತದೆ.
ವಿವೇಕಾನಂದರು ಹುಟ್ಟಿದ್ದು ಒಂದು ಸಂಪ್ರದಾಯ ಬದ್ಧವಲ್ಲದ ಕ್ಷತ್ರಿಯ ಕುಟುಂಬದಲ್ಲಿ. ಅವರು ಅಬ್ರಾಹ್ಮಣರು ಎನ್ನುವ ಕಾರಣಕ್ಕೆ ಪುರೋಹಿತ ವರ್ಗದವರು ಅವರಿಗೆ ಸನ್ಯಾಸ ದೀಕ್ಷೆ ನೀಡುವುದನ್ನು ವಿರೋಧಿಸಿ ದ್ದರು. ಆದರೆ ಸ್ವತ: ಬ್ರಾಹ್ಮಣರೇ ಆಗಿದ್ದ, ಆದರೆ ಮೊದಲು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿ ಅನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಶ್ರೀ ರಾಮಕೃಷ್ಣ ಪರಮಹಂಸರನ್ನು ಇವರು ತನ್ನ ಗುರುವಾಗಿ ಸ್ವೀಕರಿಸಿ ಅವರಿಂದ ಸನ್ಯಾಸ ದೀಕ್ಷೆಯನ್ನು ಪಡೆದರು. ಮನುಷ್ಯನ ಅಂತಸ್ತಿನಲ್ಲಿ ಮೇಲು ಅಥವ ಕೀಳು ಎಂಬ ಸ್ಥಾನಮಾನವನ್ನು ಅವನ ಹಿಟ್ಟಿನಿಂದ ನಿರ್ಧರಿಸುವುದು ಸರಿಯಲ್ಲ ಎಂದು ವಿವೇಕಾನಂದರು ಕೊನೆಯವರೆಗೂ ಪ್ರತಿಪಾದಿಸಿದರು ಮಾತ್ರವಲ್ಲ ಅಪಾರ ಪರಿಶ್ರಮ ಮತ್ತು ಆಳವಾದ ಅಧ್ಯಯನದ ಮೂಲಕ ಮೇಲ್ಜಾತಿ-ಮೇಲ್ವರ್ಗಗಳಲ್ಲಿ ಹುಟ್ಟಿದವರನ್ನೂ ಬೆರಗುಗೊಳಿಸುವ ಸಾಧನೆಯನ್ನು ಮಾಡಿ ತೋರಿಸಿದರು.
ಭಾರತದ ಸಾಮಾಜಿಕ ಪ್ರಗತಿಗೆ ಕಂಟಕಪ್ರಾಯವಾಗಿರುವ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ಕಿತ್ತೊಗೆಯದೇ ನಿಜವಾದ ಪ್ರಗತಿಸಾಧ್ಯವಿಲ್ಲವೆಂದು ವಿವೇಕಾನಂದರು ದೃಢವಾಗಿ ನಂಬಿದ್ದರು. ನಮ್ಮ ಕುಲೀನ ಮನೆತನದ ಪೂರ್ವಜರು ನಮ್ಮ ದೇಶದ ಜನಸಾಮಾನ್ಯರನು ಕಾಲಿನಿಂದ ತುಳಿದರು. ಎಲ್ಲಿಯವರೆಗೆ ಅಂದರೆ ಅವರು ಅಸಹಾಯಕರಾಗುವ ತನಕ. ಈ ಬಡಜನತೆ ಚಿತ್ರಹಿಂಸೆಯಲ್ಲಿ ನಲುಗುವ ತನಕ ಮುಂದುವರಿಸಿದರು. ಈ ಬಡಜನತೆ ಕ್ರಮೇಣ ತಾವು ಮನುಷ್ಯ ಜಾತಿಗೆ ಸೇರಿದವರು ಎಂಬುದನ್ನೇ ಮರೆತು ಬಿಟ್ಟರು. ಎಂದು ಹೇಳುವ ಮೂಲಕ ವಿವೇಕಾನಂದರು ಅಮಾನವೀಯ ಜಾತಿಪದ್ಧತಿಯನ್ನು ವಿಶ್ಲೇಷಿಸುತ್ತಾರೆ.
ಸಮಾಜ ಸುಧಾರಕರ ಒಂದು ಮುಖವಾಣಿ ಪತ್ರಿಕೆಯಲ್ಲಿ ನನ್ನನ್ನು ಶೂದ್ರ ಎಂದು ಕರೆದಿರುವುದಾಗಿ ಓದದೆ. ಶೂದ್ರನಿಗೆ ಸನ್ಯಾಸದ ಅಧಿಕಾರ ಎಲ್ಲಿದೆ ಎಂದು ನನಗೆ ಸವಾಲು ಹಾಕಿದ್ದಾರೆ. ನನ್ನನ್ನೂ ಶೂದ್ರನೆಂದು ಕರೆದರೆ ನನಗೇನೂ ಬೇಸರವಿಲ್ಲ, ನೋವಿಲ್ಲ. ನನ್ನ ಪೂರ್ವಜರು ಮಾಡಿದ ಪಾಪಕ್ಕೆ, ದೌರ್ಜನ್ಯಕ್ಕೆ ಇದು ಅಲ್ಪ ಪ್ರಾಯಶ್ಚಿತ್ತವೆಂದು ಭಾವಿಸುತ್ತೇನೆ ಹೀಗೆಂದು ಬರೆದಿದ್ದಾರೆ ಸ್ವಾಮಿ ವಿವೇಕಾನಂದರು.
ಬರಲಿದೆ ಶೂದ್ರರ ಆಳ್ವಿಕೆ.
ಭಾರತದ ಶ್ರೇಣೀಕೃತ ಜಾತಿ ಪದ್ಧತಿಯಲ್ಲಿ ಬೆವರು ಸುರಿಸಿ ದುಡಿಯುವವರೆಲ್ಲರೂ ಶೂದ್ರರು. ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಏಣಿಯ ಮೇಲ್ತುದಿಯಲ್ಲಿರುವವರು. ಅವರು ಆಸ್ತಿವಂತರು, ಅವರು ಆಳುವವರು. ಅವರ ಸೇವೆ ಮಾಡಲು ಅವರಿಗೆ ಬೇಕಾದುದೆಲ್ಲವನ್ನು ಉತ್ಪತ್ತಿ ಮಾಡಿಕೊಡ ಬೇಕಾದವರು ಶೂದ್ರರು. ಕೃಷಿಯೂ ಸೇರಿದಂತೆ ಎಲ್ಲಾ ಕಸುಬುಗಳನ್ನು ಮಾಡುವವರು ಶೂದ್ರರು. ಆದ್ದರಿಂದ ಶೂದ್ರರೆಂದರೆ ಶ್ರಮಜೀವಿಗಳು. ಮುಂಬರುವ ಯುಗದಲ್ಲಿ ಭಾರತದಲ್ಲಿ ಶೂದ್ರರೇ ಆಳ್ವಿಕೆ ನಡೆಸುತ್ತಾರೆ ಎಂಬುದು ಸ್ವಾಮಿ ವಿವೇಕಾನಂದರು ಭವಿಷ್ಯವಾಣಿ. ಭವಿಷ್ಯವು ಶೂದ್ರರಿಗೆ ಸೇರಿದ್ದಾಗಿದೆ ಎಂಬುದು ಅವರು ಕಂಡ ಕನಸಿಗೆ ತಾರ್ಕಿಕ ಕೊನೆಯಾಗಿತ್ತು. ನಿರಂತರ ತುಳಿತಕ್ಕೊಳಗಾಗಿರುವ ಭಾರತದ ಶ್ರಮ ಜೀವಿ ವರ್ಗಗಳೇ, ನಾನು ನಿಮಗೆ ಶಿರ ಬಾಗುತ್ತೇನೆ…. ಆ ಹೊಸ ಶಕ್ತಿ ಉದಿಸುವ ಮೊದಲು ಕಿರಣಗಳು ಸಾವಕಾಶವಾಗಿ ಪಾಶಿಮಾತ್ಯ ಜಗತ್ತಿನಲ್ಲಿ ಮೂಡಿ ಬರಲು ಈಗಾಗಲೇ ಪ್ರಾರಂಭಿಸಿವೆ. ವಿವೇಕಾನಂದರು ಮೇಲ್ಕಂಡ ಮಾತುಗಳನ್ನು ಹೇಳಿದ ಕೆಲವೇ ವರ್ಷಗಳಲ್ಲಿ ವಿಶ್ವದಲ್ಲಿ ಪ್ರಪ್ರಥಮ ಬಾರಿಗೆ ಶ್ರಮಿಕ ವರ್ಗದ ಪ್ರಭುತ್ವವೊಂದು ರಶಿಯಾ ದೇಶದಲ್ಲಿ ಅಸ್ತಿತ್ವಕ್ಕೆ ಬಂತು.
ಸ್ವಾಮಿ ವಿವೇಕಾನಂದರಿಗೆ ಕಾಮರ್ಿಕ ವರ್ಗದ ಚಳುವಳಿಯ ಬಗ್ಗೆ ಸ್ವಷ್ಟವಾದ ತಿಳುವಳಿಕೆ ಇದ್ದಿರಲಿಕ್ಕಿಲ್ಲ. ಅವರು ತಾನೋರ್ವ ಸಮಾಜವಾದಿ ಎಂದು ಬಹಿರಂಗವಾಗಿ ಘೋಷಿಸಿಕೊಂಡ ಮೊದಲ ಭಾರತೀಯರಾಗಿದ್ದರು. ಸಮಾಜವಾದದ ವಿಜ್ಞಾನವನ್ನು ಅಭಿವೃದ್ಧಿ ಪಡಿಸಿದ ಕಾಲರ್್ಮಾಕ್ಸರ್್ ಹಾಗೂ ಲೆನಿನ್ರವರ ಕೃತಿಗಳ ಪರಿಚಯವೂ ವಿವೇಕಾನಂದರಿಗೆ ಇದ್ದಿರಲಿಕ್ಕಿಲ್ಲ. ಆದರೂ ವಿವೇಕಾನಂದರ ಶೂದ್ರ ಪ್ರಭುತ್ವ ಮತ್ತು ಮಾಕ್ಸರ್್ ಹಾಗೂ ಲೆನಿನ್ರವರು ಪ್ರತಿಪಾದಿಸಿದ ಕಾಮರ್ಿಕವರ್ಗದ ಪ್ರಭುತ್ವಗಳ ನಡುವೆ ಸಹಜವಾದ ಸಾಮ್ಯತೆ ಕಂಡುಬರುತ್ತದೆ. ಅವೆರಡರ ನಡುವೆ ಮೂಲಭೂತ ವ್ಯತ್ಯಾಸಗಳೂ ಇವೆ. ಮಾರ್ಕ್ಸ್ ಮತ್ತು ಲೆನಿನ್ ರವರ ಪ್ರಕಾರ ಕಾಮರ್ಿಕವರ್ಗದ ನೇತೃತ್ವದಲ್ಲಿನ ಸಮಾಜವಾದಿ ಪ್ರಭುತ್ವವೂ ಸಮಾಜವಾದಿ ಕ್ರಾಂತಿಯೊಂದರ ವಿಜಯದ ಪರಿಣಾಮವಾಗಿ ಸ್ಥಾಪಿಸಲ್ಪಡುತ್ತದೆ. ಬಂಡವಾಳಶಾಹಿ ಆಳ್ವಿಕೆಯನ್ನು ಅದು ಕಿತ್ತೆಸೆಯುತ್ತದೆ. ವಿವೇಕಾನಂದರ ಶೂದ್ರರ ಪ್ರಭುತ್ವವು ಸಹ ಬಂಡವಾಳ ಶಾಹಿಗಳ ಪ್ರಭುತ್ವವನ್ನು ಶೂದ್ರರು ಕಿತ್ತೊಗೆಯುವ ಮೂಲಕವೇ ಸ್ಥಾಪನೆಯಾಗುತ್ತದೆ. ಆದರೆ ಅದನ್ನು ಹೇಗೆ ಸಾಧಿಸಲಾಗುತ್ತದೆ ಎಂಬುದರ ಬಗ್ಗೆ ವಿವೇಕಾನಂದರಿಗೆ ಸ್ವಷ್ಟತೆ ಇರಲಿಲ್ಲ. ಅದು ಮಾನವ ನಾಗರೀಕತೆಯ ಬೆಳವಣಿಗೆಯ ಮುಂದಿನ ಹಂತ ಎಂದು ತೀರಾ ಸರಳವಾಗಿ ಅವರು ವಿವರಿಸುತ್ತಾರೆ.
ವಿವೇಕಾನಂದರು ಅಮೇರಿಕ ಮತ್ತು ಇಂಗ್ಲೆಂಡಿನ ಯಶಸ್ವಿ ಪ್ರವಾಸದ ನಂತರ ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿದರು. ಶೋಷಿತ ಶೂದ್ರರ ಬಗ್ಗೆ ಅವರು ರೂಪಿಸಿಕೊಂಡ ದೃಷ್ಟಿಕೋನವು ಅವರು ದೇಶ ವಿದೇಶಗಳಲ್ಲಿ ಪಡೆದುಕೊಂಡ ಜೀವನ ಪರಿಸ್ಥಿತಿಯ ಅನುಭವಗಳ ಅನುಸಂಧಾನದ ಫಲವಾಗಿದೆ ಎಂದು ಹೇಳಬಹುದು. ಕೆಳವರ್ಗದವರೇ ಆಗಿರುವ ಶಮಜೀವಿಗಳ ಬಗ್ಗೆ ಅವರು ಹೀಗೆ ಹೇಳುತ್ತಾರೆ. ಯಂತ್ರದ ರೀತಿಯಲ್ಲಿ ಅವರುಗಳು ನಿರಂತರವಾಗಿ, ಏಕಪ್ರಕಾರವಾಗಿ ಕೆಲಸ ಮಾಡುತ್ತಲೇ ಇದ್ದಾರೆ. ಬುದ್ಧಿವಂತ ಜನ ಅವರ ಶ್ರಮದ ಬಹುಪಾಲು ಫಲವನ್ನು ಕೊಂಡೊಯ್ಯುತ್ತಾರೆ. ಇದು ಪ್ರತಿಯೊಂದು ದೇಶದ ಕಥೆಯೂ ಆಗಿದೆ. ಆದರೆ ಈಗ ಕಾಲ ಬದಲಾಗುತ್ತಾ ಬರುತ್ತಿದೆ. ಕೆಳವರ್ಗದ ಈ ಜನ ಸತ್ಯವನ್ನು ನಿಧಾನವಾಗಿ ತಿಳಿದುಕೊಂಡು ಜಾಗೃತರಾಗುತ್ತಿದ್ದಾರೆ. ಅನ್ಯಾಯದ ವಿರುದ್ಧ ಒಂದುಗೂಡುತ್ತಿದ್ದಾರೆ ಮತ್ತು ತಮ್ಮ ನ್ಯಾಯ ಸಮ್ಮತ ಪಾಲನ್ನು ಪಡೆಯಲು ಕಟಿಬದ್ಧರಾಗುತ್ತಿದ್ದಾರೆ. ಯೂರೋಪ್, ಅಮೇರಿಕ ದೇಶಗಳ ಈ ಕೆಳವರ್ಗಗಳ ಜನ ಸಮೂಹ ಪ್ರಪ್ರಥಮ ಬಾರಿಗೆ ಇಂತಹ ಜಾಗೃತಿಯನ್ನೂ ಪಡೆದುಕೊಂಡು ತಮ್ಮ ಹೋರಾಟವನ್ನು ಪ್ರಾರಂಭಿಸಿದ್ದಾರೆ. ಭಾರತದಲ್ಲೂ ಇತ್ತೀಚೆಗೆ ಕೆಳಸ್ತರದ ಜನರಿಂದ ಬಹಳಷ್ಟು ಸಂಖ್ಯೆಯ ಮುಷ್ಕರಗಳು, ಪ್ರತಿಭಟನೆಗಳು ಬೆಳೆದು ಬರುತ್ತಿವೆ. ಮೇಲ್ವರ್ಗದ ಜನಕ್ಕೆ ಇನ್ನು ಮುಂದೆ ಕೆಳವರ್ಗದ ಜನರನ್ನು ದಮನಿಸಲು ಸಾಧ್ಯವಾಗಲಾರದು ಎಂದಿದ್ದಾರೆ.
ನವ ಭಾರತದ ಆಗಮನಕ್ಕಾಗಿ ಹಂಬಲಿಸುತ್ತಾ ಭಾರತ ಮಾತೆ ಎದ್ದು ಬರಲಿ, ಬಡ ರೈತರ ಗುಡಿಸಲುಗಳಿಂದ, ಮೀನುಗಾರರ ಜೋಪಡಿಗಳಿಂದ, ಸಮಗಾರರು ಮತ್ತು ಕಸಗುಡಿಸುವವರ ಕೇರಿಗಳಿಂದ, ಕಾರ್ಖಾನೆಗಳಿಂದ, ಮಾರಾಟದ ಮಳಿಗೆಗಳಿಂದ ಮೂಡಿ ಬರಲಿ ಎಂದು ಅವರು ಹಾರೈಸುತ್ತಾರೆ. ಸ್ವಾಮಿ ವಿವೇಕಾನಂದರ ಈ ಕೆಲವು ವಿಚಾರಗಳು ಅವರ ಬಗ್ಗೆ ಗೌರವವನ್ನು ಹೆಚ್ಚಿಸುತ್ತದೆ.
ಆದರೆ ಸ್ವಾಮಿ ವಿವೇಕಾನಂದರ ಮಹಾನ್ ಮಾನವತಾವಾದಿ ವ್ಯಕ್ತಿತ್ವವನ್ನು ತಿರುಚುವ, ಅವರನ್ನು ಪ್ರತಿಗಾಮಿ ಹಿಂದುತ್ವದ ವಕ್ತಾರನನ್ನಾಗಿಸುವ ಪ್ರಯತ್ನವನ್ನು ಸಂಘಪರಿವಾರದವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಅವರು ನಮ್ಮೆಲ್ಲರಂತೆ ಮನುಷ್ಯರೇ ಆಗಿದ್ದರೂ ಅವರನ್ನು `ದೇವರು ಮಾಡುವ ಪ್ರಯತ್ನ ನಡೆಯುತ್ತಿದೆ. ಇತಿಹಾಸದುದ್ದಕ್ಕೂ ಸನಾತನಿಗಳು ಇದನ್ನೇ ಮಾಡುತ್ತಾ ಬಂದಿದ್ದಾರೆ. ದೇವರ ಅಸ್ತಿತ್ವವನ್ನು ವೇದಗಳ ಶ್ರೇಷ್ಠತೆಯನ್ನು ನಿರಾಕರಿಸಿದ ಬುದ್ದನನ್ನೇ `ಅವತಾರ ಪುರುಷ ಎಂದು ಬಿಂಬಿಸಲಾಯಿತು. ಪುರೋಹಿತಶಾಹಿಯನ್ನು, ಜಾತಿ ಪದ್ಧತಿಯನ್ನು ವಿರೋಧಿಸಿದ ಬಸವಣ್ಣನನ್ನು`ನಂದಿ ಅವತಾರ ಎಂದು ಬಿಂಬಿಸಿ ಪೂಜಿಸುವಂತೆ ಮಾಡಲಾಗಿದೆ. ತಾನೊಬ್ಬ ನಾಸ್ತಿಕ ಎಂದು ಘೋಷಿಸಿಕೊಡ ಭಗತ್ ಸಿಂಗ್ ಅವರ ಹಾಗೂ ಹಿಂದೂ ಆಗಿ ಹುಟ್ಟಿದ್ದರೂ ಹಿಂದೂ ಆಗಿ ಸಾಯಲಾರೆ ಎಂದು ಘೋಷಿಸಿದ್ದ ಡಾ|| ಅಂಬೇಡ್ಕರ್ ಅವರ ಭಾವ ಚಿತ್ರಗಳನ್ನು ಹಾಕಿಕೊಂಡು ಸಂಘಪರಿವಾರದ ಸಂಘಟನೆಗಳು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರ ವಿಚಾರಗಳ ಕುರಿತು ನಮ್ಮ ವಸ್ತುನಿಷ್ಠವಾದ ಅಧ್ಯಯನ ಹೆಚ್ಚಾಗಬೇಕಾಗಿದೆ.
- ನಿತ್ಯಾನಂದಸ್ವಾಮಿ
No comments:
Post a Comment