Saturday 25 February 2012
Thursday 23 February 2012
ಅಶ್ವಮೇಧವೂ? ಪ್ರಜಾಪ್ರಭುತ್ವದ ಮಾರಣ ಹೋಮವೋ?
ಅಶ್ವಮೇಧವೂ? ಪ್ರಜಾಪ್ರಭುತ್ವದ ಮಾರಣ ಹೋಮವೋ?
ಹಾಸನದ ದೊಡ್ಡಪುರದಲ್ಲಿ ದಿನಾಂಕ 29/02/2012 ರಿಂದ 07/03/2012 ರವರೆಗೆ 8 ದಿನಗಳ ಕಾಲ ಸುಮಾರು 8 ಕೋಟಿಗೂ ಅಧಿಕ ಖರ್ಚು ಮಾಡಿ, 20 ಎಕರೆ ಪ್ರದೇಶದಲ್ಲಿ, 108 ಕುಂಡಗಳನ್ನು ರಚಿಸಿ 600ಮಂದಿ ಪುರೋಹಿತರಿಗೆ ದಿನಕ್ಕೆ 5ಲಕ್ಷರೂ ಸಂಭಾವನೆ ಕೊಟ್ಟು ಅಶ್ವಮೇಧ ಯಾಗ ಸಂಕಲ್ಪ ನಡೆಸಲಾಗುವುದು ಇದೇ ಸಂದರ್ಭದಲ್ಲಿ ನೂರಾರು ವಿಧದ ಪೂಜೆ, ಯಜ್ಞ, ಪಾರಾಯಣ, ಅಭಿಷೇಕ, ಕನ್ಯಾಪೂಜೆಗಳನ್ನು ಕೂಡ ನಡೆಸಲಾಗುತ್ತದೆ ಪ್ರತೀ ಪೂಜೆಗೂ ದುಬಾರಿ ದರಪಟ್ಟಿ ಇದೆ. ಇದರ ಭರದ ಸಿದ್ಧತೆ ಜೋರಗಿಯೇ ನಡೆಯುತ್ತಿದೆ. ಅಸಂಬದ್ಧ ಪ್ರಲಾಪದ ಪತ್ರಿಕಾ ಗೋಷ್ಠಿಯನ್ನೂ ಬಾರಿ ಬಾರಿ ಮಾಡಿ ಲೋಕ ಕಲ್ಯಾಣಾರ್ಥ, ಸಮೃದ್ಧಿಗಾಗಿ ಹಾಗೂ ಪರಿಸರ ಸಂರಕ್ಷಣೆಗಾಗಿ ನಡೆಸಲಾಗುತ್ತಿದೆ ಹವನದಲ್ಲಿ ಹಾಕುವ ಕೋಟ್ಯಾಂತರ ರೂಗಳ ಆಹಾರ ಧಾನ್ಯಗಳನ್ನು ಅಗ್ನಿಗೆ ಆಹುತಿ ಕೊಡುವುದರಿಂದ ಓಝೋನ್ ಶುದ್ದೀಯಾಗುತ್ತದೆಂದೂ ಏನೇನೋ ಬಡಬಡಾಯಿಸಿದ್ದಾರೆ ಆಮಾನವೀಯ ಚಿಂತನಾ ಲಹರಿಗಳನ್ನೇ ತುಂಬಿಕೊಂಡವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ. ಸಂತೋಷ ಎಂದರೆ ಮಾನವ ಪ್ರೇಮಿ ಹಾಗೂ ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕರು ಸೂಕ್ತವಾಗೇ ಪ್ರತಿಕ್ರಿಯಿಸುತ್ತಿದ್ದಾರೆ ಆದರೂ ಹಣಬಲ, ಅಧಿಕಾರದ ಬಲ ಮತ್ತು ಮತಿಹೀನ ಪಾಳೆಗಾರ ಮನೋವೃತ್ತಿಯ ಸ್ಥಳೀಯ ರಾಜಕೀಯ ಮುಖಂಡರ ಸಹಬಲದಲ್ಲಿ ನಡೆಸುತ್ತಿರುವ ಭಾರತೀಯ ಧರ್ಮವನ್ನು ಸರ್ವನಾಶ ಮಾಡಿದ ಪರಂಪರೆಯ ಬಲದ ಮುಂದೆ ಪ್ರಜಾಪ್ರಭುತ್ವದ ಬಲ ಕ್ಷೀಣವಾಗೇ ಇದೆ.
ಅಶ್ವಮೇಧ ಯಾಗ ಅಂದರೇನು?
ಅಶ್ವ ಎಂದರೆ ‘ಕುದುರೆ’ ಮೇಧ ಎಂದರೆ ಬಲಿ, ಯಾಗ ಎಂದರೆ ಹವನಕುಂಡ ಅದರೊಳಗೆ ಕಟ್ಟಿಗೆ ಬೆಂಕಿ ಮತ್ತು ಇತ್ಯಾದಿ ಅಗ್ನಿಜನ್ಯ ವಸ್ತುಗಳನ್ನು ಹಾಕಿ ಉರಿಸುವ ವೈದಿಕ ಆಚರಣೆ. ಒಟ್ಟಾರೆ ಕುದುರೆಯನ್ನು ಬಲಿ ಕೊಡುವ ಯಾಗ. ರಾಜ್ಯ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ, ಸಂಪನ್ಮೂಲ ವೃದ್ಧಿಗಾಗಿ ಹಾಗೂ ತನ್ನ ಶೌರ್ಯ ಪ್ರದರ್ಶನಕ್ಕಾಗಿ ನಡೆಸುತ್ತಿದ್ದ ಸಾಮ್ರಾಜ್ಯಶಾಹಿ ರಾಜಕೀಯ ಚಟುವಟಿಕೆ. ಐತಿಹಾಸಿಕವಾಗಿ ಇದಕ್ಕೆ ಯಾವುದೇ ಮಹತ್ವ ಇಲ್ಲ ಪುರಾಣ ಗ್ರಂಥಗಳಲ್ಲಿ ಮಾತ್ರ ಇದನ್ನು ವೈಭವೀಕರಿಸಿ ಚಿತ್ರಿಸಲಾಗಿದೆ. ಆ ಪುರಾಣ ಗ್ರಂಥಗಳ ಪ್ರಕಾರ ಸರ್ವಾಲಂಕೃತ ಕುದುರೆಯನ್ನು ರಾಜ ವೈದಿಕ ಪುರೋಹಿತರ ಮಂತ್ರ ಘೋಷಗಳ ಮೂಲಕ ಬ್ರಾಹ್ಮಣರ ಮತ್ತು ರಾಜಪರಿವಾರ ಹಾಗೂ ವಿ.ಐ.ಪಿಗಳ ಬೃಹತ್ ಸಮ್ಮುಖದಲ್ಲಿ ಮಹಾರಾಣಿ ಕುದುರೆಯನ್ನು ಆಲಂಗಿಸಿ, ರಮಿಸಿ ಉದ್ಘಾಟಿಸುವಳು ನಂತರ ರಾಜಪುರೋಹಿತರು ಕುದುರೆಯ ಮುಖದ ಮೇಲೆ ಯಾಗದ ಕರಾರು ಸುತ್ತೋಲೆಯನ್ನು ಅಚ್ಚಿಸಿರುವ ತಾಮ್ರದ ಫಲಕ ಲಗತ್ತಿಸಿ ಬೀಳ್ಕೊಡುತ್ತಾರೆ ಅದರ ಹಿಂದೆ ಹಿಂದೆ ಯದ್ಧ ಸನ್ನದ್ಧ ಸೈನ್ಯ, ಕಪ್ಪ ಸಂಗ್ರಾಹಕ ಅಧಿಕಾರಿಗಳು ಆಳು ಕಾಳುಗಳ ದಂಡೇ ಸಾಗುತ್ತದೆ. ಸ್ವಚ್ಛಂದವಾಗಿ ತಿರುಗಾಡಿ ಯಾವ ರಾಜನ ಪ್ರದೇಶದಲ್ಲಿ ಅದು ಹಾದು ಹೋಗುತ್ತದೋ ಆ ಪ್ರದೇಶದ ರಾಜ ಯುದ್ಧ ಮಾಡಲು ಸಿದ್ಧನಾದರೆ ಕುದುರೆ ಕಟ್ಟಿ ಹಾಕಬೇಕು ಅಥವ ವಶಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಸೋತೆನೆಂದು ಶರಣಾಗತಿಯನ್ನು ತೋರಿಸಬೇಕು. ಆನಂತರ ಆತ ಯಾಗ ನಡೆಸಿದ ರಾಜನ ಕೇವಲ ಸಾಮಂತನಾಗುತ್ತಾನೆ ಮಾತ್ರವಲ್ಲ ಅಪಾರ ಪ್ರಮಾಣದಲ್ಲಿ ನಗ, ನಾಣ್ಯಗಳ ಕಪ್ಪ-ಕಾಣಿಕೆ ನೀಡಬೇಕು ಮತ್ತು ರಾಜನ ಬೃಹತ್ ಸೈನ್ಯವನ್ನು ಎಲ್ಲಾ ರೀತಿಯಲ್ಲೂ ತೃಪ್ತಿಪಡಿಸಬೇಕು ಇದೊಂದು ಹಗಲು ದರೋಡೆ ಮತ್ತು ಜನರ ಹಾಗೂ ಒಂದು ರಾಷ್ಟ್ರದ ಸ್ವಾತಂತ್ರವನ್ನೇ ನಾಶಮಾಡುವಂತಹುದ್ದು ಹೀಗೆ ಯಾಗ ದುರ್ಬಲ ಸಂಸ್ತಾನಗಳನ್ನೆಲ್ಲಾ ನುಂಗಿ ನೀರುಕುಡಿದು ಏಕ ಚಕ್ರಾಧಿಪತ್ಯವನ್ನುಸ್ಥಾಪಿಸುವ ಇಂದಿನ ಅಮೇರಿಕದ ಸಾಮ್ರಾಜ್ಯಶಾಹಿ ನೀತಿ ಅಂದಿನ ವೈದಿಕ ರಾಜರದ್ದು. ಇದು ಪ್ರಜಾಪ್ರಭುತ್ವ ವ್ವಸ್ಥೆಯಲ್ಲಿ ಬೇಕಾ?
ಪಾಪ ರಾಜರ ಸಾಮ್ರಾಜ್ಯವನ್ನು ವಿಸ್ತರಿಸಲು, ಲೂಟಿ ಹೊಡೆಯಲು ತನ್ನೆಲ್ಲ ಜೀವವನ್ನು ಧಾರೆ ಎರೆದ ಅಶ್ವಮೇಧದ ಕುದುರೆ ತನ್ನ ಯಾಗ ಮುಗಿಸಿ ಬಂದನಂತರದ ಸಮಾರೋಪ ಎಷ್ಟೊಂದು ಹೃದಯ ವಿದ್ರಾವಕವಾಗಿದೆ ಎಂದರೆ ಅದನ್ನ ನೆನೆಸಿಕೊಂಡರೆ ಇಂತಹ ಸಂಸ್ಕೃತಿಯ ಭಾಗ ಎನ್ನುವುದಕ್ಕೂ ನಾವು ಹೇಸಿಗೆ ಪಡಬೇಕಾಗುತ್ತದೆ.
ಕನ್ನಡ ವಿಶ್ವಕೋಶದ ಪ್ರಕಾರ-ಅಶ್ವಮೇಧವು ವಸಂತ ಅಥವಾ ಗ್ರೀಷ್ಮಋತುಗಳಲ್ಲಿ ನಡೆಸಲ್ಪಡುತ್ತಿದ್ದ ಒಂದು ಜನಪ್ರಿಯ ರಾಜ್ಯೋತ್ಸವ. ಗಾಯನ, ವೇಣು ವಾದನ ಇತ್ಯಾದಿಗಳನ್ನೊಳಗೊಂಡ ಈ ಉತ್ಸವದಲ್ಲಿ ಉತ್ತಮ ತಳಿಯ ಕುದುರೆಯೊಂದನ್ನು, ಅದು ಸ್ವೇಚ್ಛೆಯಾಗಿ ರಾಜಕುಮಾರರ-ಅಧಿಕಾರಿಗಳ ಬೆಂಗಾವಲಿನಲ್ಲಿ ಒಂದು ವರ್ಷ ಸುತ್ತಾಡಿ ಬಂದನಂತರ , ಹೋತವೊಂದರ ಜೊತೆಯಲ್ಲಿ ಬಲಿಗಂಬಕ್ಕೆ ಕಟ್ಟಿ, ನಂತರ ಅದರ ಮೇಲೆ ಬಟ್ಟೆಯನ್ನು ಹೊದಿಸಿ ಉಸಿರುಕಟ್ಟಿಸಿ ಸಾಯಿಸಲಾಗುತ್ತಿತ್ತು. ಆಮೇಲೆ ಅದನ್ನು ಜಾಣತನದಿಂದ ಕತ್ತರಿಸಿ ವಿವಿಧ ಭಾಗಗಳನ್ನು ಒಲೆಗಳ ಮೇಲೆ ಸುಟ್ಟು ಪ್ರಜಾಪತಿಗೆ ಅರ್ಪಿಸಲಾಗುತ್ತಿತ್ತು. ಬೇರೆ ಸಾವಿರಾರು ಪ್ರಾಣಿಗಳೂ ಬಲಿಯಾಗುತ್ತಿದ್ದವು.
ಅಶ್ವಮೇಧ ಯಾಗ ನಡೆಸುವ ವಿಧಿ ವಿಧಾನಗಳು ಎಷ್ಟೊಂದು ಅಶ್ಲೀಲವಾಗಿದೆ ಎಂದರೆ ಜಗತ್ತಿನ ಯಾವ ನೀಲಿ ಚಿತ್ರಕ್ಕಿಂತಲೂ ನಿಕೃಷ್ಟವಲ್ಲದ ಆಚರಣೆಗಳು. ನಮಗೆ ಸಭ್ಯತೆ ಇರುವ ಕಾರಣ ಅದನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ ಯಜುರ್ವೇದದ ಅಧ್ಯಾಯ 23 ರ 16 ರಿಂದ 31 ಮಂತ್ರಗಳು ಅಶ್ವಮೇಧ ಯಾಗದಲ್ಲಿ ಹೇಳುವ ಮಂತ್ರಗಳು(ಈ ಮಂತ್ರಗಳು ರತಿವಿಜ್ಞಾನದ ಪರಕಾಷ್ಟೆ) ಹಾಗೂ ಶತಪಥ ಬ್ರಾಹ್ಮಣವೂ ಇದನ್ನೇ ಪುನರಾವರ್ತಿಸಿದೆ.
ಅಶ್ವಮೇಧ ಯಾಗ ಯಾರ ಹಕ್ಕು?
ಆರ್ಯ ರಾಜರು ಮಾತ್ರ ಈ ಯಾಗ ಮಾಡಲು ಅರ್ಹರಾಗಿದ್ದರು ಅನಾರ್ಯರಿಗೆ ಹಕ್ಕಿಲ್ಲ ಅಂದರೆ ಸಾಮ್ರಾಜ್ಯ ವಿಸ್ತರಣೆ ಮತ್ತು ಲೋಕ ಕಲ್ಯಾಣ ಕೇವಲ ಆರ್ಯರ ಸ್ವತ್ತು ಅದನ್ನು ಮೀರಿ ಬಲಿಚಕ್ರವರ್ತಿ ನಡೆಸಲು ಮುಂದಾದಕ್ಕೆ ಮೋಸದಿಂದ ಪುರೋಹಿತರು ವಾಮನನ ಅವತಾರದಲ್ಲಿ ಬಂದು ಬಲಿಯನ್ನು ನಾಶ ಮಾಡಿದ್ದು ಪುರಾಣ ಇತಿಹಾಸ, ಪರೀಕ್ಷಿತನ ಮೊಮ್ಮಗ ಜನಮೇಜಯನ ಯಾಗಕ್ಕೂ ತುರಕಾಶೇಯನು ಭಂಗ ತಂದು ಋಷಿಮುನಿಗಳ ಮಾರಣಹೋಮಕ್ಕೆ ಹಾದಿ ಮಾಡಿಕೊಟ್ಟಿದ್ದು ಈ ಕುತಂತ್ರವೆ. ಪುರಾಣೇತಿಹಾಸದಲ್ಲಿ ಮಹಾಭಾರತದಲ್ಲಿ ಧರ್ಮರಾಯ ಹಾಗೂ ಮಹಾಭಾರತದಲ್ಲಿ ಶ್ರೀರಾಮ (ಇಬ್ಬರೂ ಆರ್ಯೀಕರಣಗೊಂಡ ಕ್ಷತ್ರಿಯರು) ಅಶ್ವಮೇಧ ಯಾಗ ನಡೆಸಿದ ಉಲ್ಲೇಖ ಇದೆ ಬುದ್ದನ ನಂತರದ ದಿನಗಳಲ್ಲಿ ಅಶ್ವಮೇಧ ಯಾಗ ನಡೆಸಿದ ನಿದರ್ಶನ ಯಾವ ಪುಸ್ತಕಗಳಲ್ಲೂ ಇಲ್ಲ ಕೇವಲ ಕ್ರ.ಪೂ1500 ವರ್ಷಗಳ ಹಿಂದಿನ ದ್ರಾವಿಡರನ್ನು ಆರ್ಯರು ಸರ್ವನಾಶ ಮಾಡಿದ ವಿಧಾನವನ್ನು 500ವರ್ಷಗಳ ನಂತರ ರಚಿಸಿದ ಯಜುರ್ವೇದ ಮತ್ತು ಬ್ರಾಹ್ಮಣ ದರ್ಷನಗಳಲ್ಲಿ ಮಾತ್ರ ಉಲ್ಲೇಖ ಆರ್ಯರ ಮೂಲಗ್ರಂಥ ಋಗ್ವೇದದಲ್ಲಿ ಇದರ ಎಳ್ಳಷ್ಟೂ ಇಲ್ಲ.
ಇಷ್ಟೊಂದೂ ಅಮಾನವೀಯ ಯಾಗವನ್ನು ಯಾರೂ ವಿರೋಧಿಸಲಿಲ್ಲವೆ?
ಜರ್ಮನ್ ನಾಟಕಕಾರ ಮತ್ತು ಕವಿ ಬ್ರೆಕ್ಟ್ ತನ್ನ ಒಂದು ಕವನದಲ್ಲಿ ಹೀಗೆ ಹೇಳುತ್ತಾನೆ; "ನೀತಿ ಬೋಧಕರು, ಹಲವರಿಗೆ ತಿಳಿಯದ ಲ್ಯಾಟಿನ್ ಭಾಷೆಯಲ್ಲಿ ಪ್ರವಚನ ನೀಡುತ್ತಾರೆ. ನಾನು ಅದನ್ನು ಸಾಮಾನ್ಯರ ಆಡುಮಾತಿಗೆ ಅನುವಾದ ಮಾಡುತ್ತೇನೆ. ಆಗ ಅದರಲ್ಲಿ ಅಡಗಿರುವ ಮೋಸವೆಲ್ಲಾ ಬಯಲಾಗುತ್ತದೆ." ಇದೇ ಮಾತನ್ನು ಸಂಸ್ಕೃತದಲ್ಲಿರುವ ವೈದಿಕ ಸಾಹಿತ್ಯಕ್ಕೂ ಅನ್ವಯಿಸಬಹುದು. ವೇದಗಳ ಕಾಲದಲ್ಲಿ ಚಾರ್ವಾಕರು, ಲೋಕಾಯತರು ಭಾರಿ ಬಹಿರಂಗವಾಗೆ ಇವುಗಳನ್ನು ವಿರೋಧಿಸಿದ್ದಾರೆ ಅವರಿಗಳನ್ನು ನಾಶ ಮಾಡಲಾಯಿತು ಆ ಕಾಲಘಟ್ಟದ ಲೋಕಾಯತ ಚಳವಳಿ ಶೂದ್ರ ರಾಜ್ಯಗಳನ್ನು ಮತ್ತು ಗಣರಾಜ್ಯಗಳನ್ನು ಆರ್ಯರ ವಿರುದ್ಧ ಸ್ವಲ್ಪ ಕಾಲ ತಡೆಯಲು ಸಾಧ್ಯ ವಾಗಿತ್ತು ನಂತರ ಮಹಾವೀರ ಇಂತಹ ಸಿದ್ದಾಂತಕ್ಕೆ ಅಘಾತಕಾರಿ ಪೆಟ್ಟನ್ನು ಕೊಟ್ಟ ಜೈನ ಧರ್ಮ ಆರ್ಯರ ಒಂದು ವರ್ಗವನ್ನು(ವೈಶ್ಯ) ಕಿತ್ತುಕೊಂಡೇ ಬಿಟ್ಟಿತು ಹಾಗೂ ಬೌದ್ಧ ಧರ್ಮ ಈ ನೆಲದಲ್ಲಿ ಇನ್ನಿಲ್ಲದಂತೆ ಈ ಆಚರಣೆಯನ್ನು ಇಲ್ಲವಾಗಿಸಿತು ಮಾತ್ರವಲ್ಲ ಆರ್ಯ ಸಾಮ್ರಾಜ್ಯಗಳನ್ನೇ ನಿರ್ನಾಮ ಮಾಡಿತು ತದನಂತರ ದಾಸ ಚಳುವಳಿ, ಶರಣಚಳುವಳಿ ಇಂತಹ ಆಚರಣೆಗಳಿಗೆ ಮಾರಣಾಂತಿಕ ಪೆಟ್ಟು ನೀಡಿದವು. ಈ ಹಾಸನದವರಿಗೇನು ಬಂದಿದೆಯೋ ಕಾಣೆ ಈ ಪ್ರಜಾಪ್ರಭುತ್ವ ಯುಗದಲ್ಲೂ ಈ ಸಾಮ್ರಾಜ್ಯಶಾಹಿ ಚಟುವಟಿಕೆಯನ್ನ ನಡೆಸುತ್ತಿದ್ದಾರಲ್ಲ ಇವರು ನಿಸ್ಸಂದೇಹವಾಗಿಯೂ ಪ್ರಜಾಪ್ರಭುತ್ವದ ವಿರೋಧಿಗಳು.
ಸ್ವಾತಂತ್ರ್ಯ ವಿರೋಧಿ ಅಶ್ವಮೇಧ ಎಲ್ಲಿ, ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಪ್ರಜಾಸತ್ತೆ ಎಲ್ಲಿ ಇದು ಎಷ್ಟರ ಮಟ್ಟಿಗೆ ಪ್ರಸ್ತುತ ಅನ್ನುವುದಷ್ಟೇ ಈಗಿನ ಪ್ರಶ್ನೆ. ಆ 8ಕೋಟಿರೂಗಳಲ್ಲಿ ಹಾಸನದ 20 ಗ್ರಾಮ ಪಂಚಾಯತಿಗಳ ಮೂಲಭೂತ ಸೌಕರ್ಯಗಳನ್ನು ಭರಪೂರ ಗೊಳಿಸಬಹುದಿತ್ತು, 1000 ವಿಶಾಲವಾದ ಮನೆಗಳನ್ನು ವಸತಿಹೀನರಿಗೆ ಕಟ್ಟಿಸಿ ಕೊಡಬಹುದಿತ್ತು. ಇಡಿ ಹಾಸನ ಜಿಲ್ಲೆಯ 1ರಿಂದ 10ನೇ ಶಾಲೆವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ, ಸವಲತ್ತುಗಳನ್ನು ನೀಡಬಹುದಿತ್ತು ಇನ್ನು ಏನೇನೊ ಮಾಡಬಹುದಿತ್ತು.
ಪ್ರಜಾಪ್ರಭುತ್ವ ಪ್ರೀತಿಸುವವರು ಯಾರಾದರು ಇದ್ದರೆ ಯೋಚಿಸಿ.
-ಹೆಚ್,ಎ,ಅಹಮದ್. ಹಾಸನ
Wednesday 22 February 2012
ಸಂಘ ಪರಿವಾರದ ಹಿಂದುತ್ವಕ್ಕಿಂತ ಬೇರೆಯಾದ ಶೂದ್ರ ಸನ್ಯಾಸಿ ವಿವೇಕಾನಂದರ ಹಿಂದೂ ಧರ್ಮ
ದೇವರ ಅಸ್ತಿತ್ವವನ್ನು ವೇದಗಳ ಶ್ರೇಷ್ಠತೆಯನ್ನು ನಿರಾಕರಿಸಿದ ಬುದ್ದನನ್ನೇ `ಅವತಾರ ಪುರುಷ ಎಂದು ಬಿಂಬಿಸಲಾಯಿತು. ಪುರೋಹಿತಶಾಹಿಯನ್ನು, ಜಾತಿ ಪದ್ಧತಿಯನ್ನು ವಿರೋಧಿಸಿದ ಬಸವಣ್ಣನನ್ನು`ನಂದಿ ಅವತಾರ ಎಂದು ಬಿಂಬಿಸಿ ಪೂಜಿಸುವಂತೆ ಮಾಡಲಾಗಿದೆ. ತಾನೊಬ್ಬ ನಾಸ್ತಿಕ ಎಂದು ಘೋಷಿಸಿಕೊಡ ಭಗತ್ ಸಿಂಗ್ ಅವರ ಹಾಗೂ ಹಿಂದೂ ಆಗಿ ಹುಟ್ಟಿದ್ದರೂ ಹಿಂದೂ ಆಗಿ ಸಾಯಲಾರೆ ಎಂದು ಘೋಷಿಸಿದ್ದ ಡಾ|| ಅಂಬೇಡ್ಕರ್ ಅವರ ಭಾವ ಚಿತ್ರಗಳನ್ನು ಹಾಕಿಕೊಂಡು ಸಂಘಪರಿವಾರದ ಸಂಘಟನೆಗಳು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರ ವಿಚಾರಗಳ ಕುರಿತು ನಮ್ಮ ವಸ್ತುನಿಷ್ಠವಾದ ಅಧ್ಯಯನ ಹೆಚ್ಚಾಗಬೇಕಾಗಿದೆ.
ಮಾನವ ಸಮಾಜವು ಸರದಿಯ ಪ್ರಕಾರ ನಾಲ್ಕು ವರ್ಣಗಳಿಂದ ಆಳಲ್ಪಡುತ್ತಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ….. ಮೊದಲನೆಯ ಮೂರಕ್ಕೂ ತಮ್ಮ ತಮ್ಮ ಯುಗಗಳಿದ್ದವು. ಈಗ ಕಡೆಯದರ ಕಾಲ. ಅದು ಬರಲೇಬೇಕು. ಅದನ್ನೂ ಯಾರೂ ತಡೆಯಲಾರರು! ಹೀಗೊಂದು ಭವಿಷ್ಯವಾಣಿ ನುಡಿದಿದ್ದವರು ಬೇರೆ ಯಾರು ಅಲ್ಲ. ಅವರೇ ಸ್ವಾಮಿ ವಿವೇಕಾನಂದರು.
ಇದೇ ಜನವರಿ 12 ರಂದು ದೇಶದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆ ಆರಂಭವಾಗಿದೆ. 2013 ರ ಜನವರಿ 12ರವರೆಗೂ ಅದು ನಡೆಯಲಿದೆ. ಸ್ವಾಮಿ ವಿವೇಕಾನಂದ ಎಂದೇ ವಿಶ್ವಕ್ಕೆ ಚಿರಪರಿಚಿತರಾದ ಕಲ್ಕತ್ತಾದ ನರೇಂದ್ರನಾಥ ದತ್ತ ಭಾರತದ ಓರ್ವ ಹೆಮ್ಮೆಯ ಪುತ್ರ. ಅವರ ಎಲ್ಲ ವಿಚಾರಗಳ ಬಗ್ಗೆ ಸಹಮತ ಸಾಧ್ಯವಾಗಲಿಕ್ಕಿಲ್ಲ. ಆದರೆ ಅವರು ಬಲವಾಗಿ ಪ್ರತಿಪಾದಿಸುತ್ತಿದ್ದ ಪರಮತ ಸಹಿಷ್ಣುತೆ ನಮಗೆ ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ್ತವಾಗಿದೆ. ಸ್ವಾಮಿ ವಿವೇಕಾನಂದರು ವಿಶ್ವಕ್ಕೇ ಪರಿಚಯಿಸಿದ ಹಿಂದೂ ಧರ್ಮವೇ ಬೇರೆ, ಇಂದು ಆರೆಸ್ಸೆಸ್ ಪ್ರತಿಪಾದಿಸುತ್ತಿರುವ ಹಿಂದುತ್ವವೇ ಬೇರೆ ಎಂಬುದನ್ನು ಕಾಣಲು ಸಾಧ್ಯವಾದಾಗ ನಮಗೆ ಸ್ವಾಮಿ ವಿವೇಕಾನಂದರೇ ಬೇರೆ, ಉಡುಪಿಯ ಇಂದಿನ ಪೇಜಾವರ ಸ್ವಾಮಿಗಳಂತಹವರೇ ಬೇರೆ ಎಂಬುದು ಸ್ಪಷ್ಟವಾಗುತ್ತದೆ.
ವಿವೇಕಾನಂದರು ಹುಟ್ಟಿದ್ದು ಒಂದು ಸಂಪ್ರದಾಯ ಬದ್ಧವಲ್ಲದ ಕ್ಷತ್ರಿಯ ಕುಟುಂಬದಲ್ಲಿ. ಅವರು ಅಬ್ರಾಹ್ಮಣರು ಎನ್ನುವ ಕಾರಣಕ್ಕೆ ಪುರೋಹಿತ ವರ್ಗದವರು ಅವರಿಗೆ ಸನ್ಯಾಸ ದೀಕ್ಷೆ ನೀಡುವುದನ್ನು ವಿರೋಧಿಸಿ ದ್ದರು. ಆದರೆ ಸ್ವತ: ಬ್ರಾಹ್ಮಣರೇ ಆಗಿದ್ದ, ಆದರೆ ಮೊದಲು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿ ಅನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಶ್ರೀ ರಾಮಕೃಷ್ಣ ಪರಮಹಂಸರನ್ನು ಇವರು ತನ್ನ ಗುರುವಾಗಿ ಸ್ವೀಕರಿಸಿ ಅವರಿಂದ ಸನ್ಯಾಸ ದೀಕ್ಷೆಯನ್ನು ಪಡೆದರು. ಮನುಷ್ಯನ ಅಂತಸ್ತಿನಲ್ಲಿ ಮೇಲು ಅಥವ ಕೀಳು ಎಂಬ ಸ್ಥಾನಮಾನವನ್ನು ಅವನ ಹಿಟ್ಟಿನಿಂದ ನಿರ್ಧರಿಸುವುದು ಸರಿಯಲ್ಲ ಎಂದು ವಿವೇಕಾನಂದರು ಕೊನೆಯವರೆಗೂ ಪ್ರತಿಪಾದಿಸಿದರು ಮಾತ್ರವಲ್ಲ ಅಪಾರ ಪರಿಶ್ರಮ ಮತ್ತು ಆಳವಾದ ಅಧ್ಯಯನದ ಮೂಲಕ ಮೇಲ್ಜಾತಿ-ಮೇಲ್ವರ್ಗಗಳಲ್ಲಿ ಹುಟ್ಟಿದವರನ್ನೂ ಬೆರಗುಗೊಳಿಸುವ ಸಾಧನೆಯನ್ನು ಮಾಡಿ ತೋರಿಸಿದರು.
ಭಾರತದ ಸಾಮಾಜಿಕ ಪ್ರಗತಿಗೆ ಕಂಟಕಪ್ರಾಯವಾಗಿರುವ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ಕಿತ್ತೊಗೆಯದೇ ನಿಜವಾದ ಪ್ರಗತಿಸಾಧ್ಯವಿಲ್ಲವೆಂದು ವಿವೇಕಾನಂದರು ದೃಢವಾಗಿ ನಂಬಿದ್ದರು. ನಮ್ಮ ಕುಲೀನ ಮನೆತನದ ಪೂರ್ವಜರು ನಮ್ಮ ದೇಶದ ಜನಸಾಮಾನ್ಯರನು ಕಾಲಿನಿಂದ ತುಳಿದರು. ಎಲ್ಲಿಯವರೆಗೆ ಅಂದರೆ ಅವರು ಅಸಹಾಯಕರಾಗುವ ತನಕ. ಈ ಬಡಜನತೆ ಚಿತ್ರಹಿಂಸೆಯಲ್ಲಿ ನಲುಗುವ ತನಕ ಮುಂದುವರಿಸಿದರು. ಈ ಬಡಜನತೆ ಕ್ರಮೇಣ ತಾವು ಮನುಷ್ಯ ಜಾತಿಗೆ ಸೇರಿದವರು ಎಂಬುದನ್ನೇ ಮರೆತು ಬಿಟ್ಟರು. ಎಂದು ಹೇಳುವ ಮೂಲಕ ವಿವೇಕಾನಂದರು ಅಮಾನವೀಯ ಜಾತಿಪದ್ಧತಿಯನ್ನು ವಿಶ್ಲೇಷಿಸುತ್ತಾರೆ.
ಸಮಾಜ ಸುಧಾರಕರ ಒಂದು ಮುಖವಾಣಿ ಪತ್ರಿಕೆಯಲ್ಲಿ ನನ್ನನ್ನು ಶೂದ್ರ ಎಂದು ಕರೆದಿರುವುದಾಗಿ ಓದದೆ. ಶೂದ್ರನಿಗೆ ಸನ್ಯಾಸದ ಅಧಿಕಾರ ಎಲ್ಲಿದೆ ಎಂದು ನನಗೆ ಸವಾಲು ಹಾಕಿದ್ದಾರೆ. ನನ್ನನ್ನೂ ಶೂದ್ರನೆಂದು ಕರೆದರೆ ನನಗೇನೂ ಬೇಸರವಿಲ್ಲ, ನೋವಿಲ್ಲ. ನನ್ನ ಪೂರ್ವಜರು ಮಾಡಿದ ಪಾಪಕ್ಕೆ, ದೌರ್ಜನ್ಯಕ್ಕೆ ಇದು ಅಲ್ಪ ಪ್ರಾಯಶ್ಚಿತ್ತವೆಂದು ಭಾವಿಸುತ್ತೇನೆ ಹೀಗೆಂದು ಬರೆದಿದ್ದಾರೆ ಸ್ವಾಮಿ ವಿವೇಕಾನಂದರು.
ಬರಲಿದೆ ಶೂದ್ರರ ಆಳ್ವಿಕೆ.
ಭಾರತದ ಶ್ರೇಣೀಕೃತ ಜಾತಿ ಪದ್ಧತಿಯಲ್ಲಿ ಬೆವರು ಸುರಿಸಿ ದುಡಿಯುವವರೆಲ್ಲರೂ ಶೂದ್ರರು. ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಏಣಿಯ ಮೇಲ್ತುದಿಯಲ್ಲಿರುವವರು. ಅವರು ಆಸ್ತಿವಂತರು, ಅವರು ಆಳುವವರು. ಅವರ ಸೇವೆ ಮಾಡಲು ಅವರಿಗೆ ಬೇಕಾದುದೆಲ್ಲವನ್ನು ಉತ್ಪತ್ತಿ ಮಾಡಿಕೊಡ ಬೇಕಾದವರು ಶೂದ್ರರು. ಕೃಷಿಯೂ ಸೇರಿದಂತೆ ಎಲ್ಲಾ ಕಸುಬುಗಳನ್ನು ಮಾಡುವವರು ಶೂದ್ರರು. ಆದ್ದರಿಂದ ಶೂದ್ರರೆಂದರೆ ಶ್ರಮಜೀವಿಗಳು. ಮುಂಬರುವ ಯುಗದಲ್ಲಿ ಭಾರತದಲ್ಲಿ ಶೂದ್ರರೇ ಆಳ್ವಿಕೆ ನಡೆಸುತ್ತಾರೆ ಎಂಬುದು ಸ್ವಾಮಿ ವಿವೇಕಾನಂದರು ಭವಿಷ್ಯವಾಣಿ. ಭವಿಷ್ಯವು ಶೂದ್ರರಿಗೆ ಸೇರಿದ್ದಾಗಿದೆ ಎಂಬುದು ಅವರು ಕಂಡ ಕನಸಿಗೆ ತಾರ್ಕಿಕ ಕೊನೆಯಾಗಿತ್ತು. ನಿರಂತರ ತುಳಿತಕ್ಕೊಳಗಾಗಿರುವ ಭಾರತದ ಶ್ರಮ ಜೀವಿ ವರ್ಗಗಳೇ, ನಾನು ನಿಮಗೆ ಶಿರ ಬಾಗುತ್ತೇನೆ…. ಆ ಹೊಸ ಶಕ್ತಿ ಉದಿಸುವ ಮೊದಲು ಕಿರಣಗಳು ಸಾವಕಾಶವಾಗಿ ಪಾಶಿಮಾತ್ಯ ಜಗತ್ತಿನಲ್ಲಿ ಮೂಡಿ ಬರಲು ಈಗಾಗಲೇ ಪ್ರಾರಂಭಿಸಿವೆ. ವಿವೇಕಾನಂದರು ಮೇಲ್ಕಂಡ ಮಾತುಗಳನ್ನು ಹೇಳಿದ ಕೆಲವೇ ವರ್ಷಗಳಲ್ಲಿ ವಿಶ್ವದಲ್ಲಿ ಪ್ರಪ್ರಥಮ ಬಾರಿಗೆ ಶ್ರಮಿಕ ವರ್ಗದ ಪ್ರಭುತ್ವವೊಂದು ರಶಿಯಾ ದೇಶದಲ್ಲಿ ಅಸ್ತಿತ್ವಕ್ಕೆ ಬಂತು.
ಸ್ವಾಮಿ ವಿವೇಕಾನಂದರಿಗೆ ಕಾಮರ್ಿಕ ವರ್ಗದ ಚಳುವಳಿಯ ಬಗ್ಗೆ ಸ್ವಷ್ಟವಾದ ತಿಳುವಳಿಕೆ ಇದ್ದಿರಲಿಕ್ಕಿಲ್ಲ. ಅವರು ತಾನೋರ್ವ ಸಮಾಜವಾದಿ ಎಂದು ಬಹಿರಂಗವಾಗಿ ಘೋಷಿಸಿಕೊಂಡ ಮೊದಲ ಭಾರತೀಯರಾಗಿದ್ದರು. ಸಮಾಜವಾದದ ವಿಜ್ಞಾನವನ್ನು ಅಭಿವೃದ್ಧಿ ಪಡಿಸಿದ ಕಾಲರ್್ಮಾಕ್ಸರ್್ ಹಾಗೂ ಲೆನಿನ್ರವರ ಕೃತಿಗಳ ಪರಿಚಯವೂ ವಿವೇಕಾನಂದರಿಗೆ ಇದ್ದಿರಲಿಕ್ಕಿಲ್ಲ. ಆದರೂ ವಿವೇಕಾನಂದರ ಶೂದ್ರ ಪ್ರಭುತ್ವ ಮತ್ತು ಮಾಕ್ಸರ್್ ಹಾಗೂ ಲೆನಿನ್ರವರು ಪ್ರತಿಪಾದಿಸಿದ ಕಾಮರ್ಿಕವರ್ಗದ ಪ್ರಭುತ್ವಗಳ ನಡುವೆ ಸಹಜವಾದ ಸಾಮ್ಯತೆ ಕಂಡುಬರುತ್ತದೆ. ಅವೆರಡರ ನಡುವೆ ಮೂಲಭೂತ ವ್ಯತ್ಯಾಸಗಳೂ ಇವೆ. ಮಾರ್ಕ್ಸ್ ಮತ್ತು ಲೆನಿನ್ ರವರ ಪ್ರಕಾರ ಕಾಮರ್ಿಕವರ್ಗದ ನೇತೃತ್ವದಲ್ಲಿನ ಸಮಾಜವಾದಿ ಪ್ರಭುತ್ವವೂ ಸಮಾಜವಾದಿ ಕ್ರಾಂತಿಯೊಂದರ ವಿಜಯದ ಪರಿಣಾಮವಾಗಿ ಸ್ಥಾಪಿಸಲ್ಪಡುತ್ತದೆ. ಬಂಡವಾಳಶಾಹಿ ಆಳ್ವಿಕೆಯನ್ನು ಅದು ಕಿತ್ತೆಸೆಯುತ್ತದೆ. ವಿವೇಕಾನಂದರ ಶೂದ್ರರ ಪ್ರಭುತ್ವವು ಸಹ ಬಂಡವಾಳ ಶಾಹಿಗಳ ಪ್ರಭುತ್ವವನ್ನು ಶೂದ್ರರು ಕಿತ್ತೊಗೆಯುವ ಮೂಲಕವೇ ಸ್ಥಾಪನೆಯಾಗುತ್ತದೆ. ಆದರೆ ಅದನ್ನು ಹೇಗೆ ಸಾಧಿಸಲಾಗುತ್ತದೆ ಎಂಬುದರ ಬಗ್ಗೆ ವಿವೇಕಾನಂದರಿಗೆ ಸ್ವಷ್ಟತೆ ಇರಲಿಲ್ಲ. ಅದು ಮಾನವ ನಾಗರೀಕತೆಯ ಬೆಳವಣಿಗೆಯ ಮುಂದಿನ ಹಂತ ಎಂದು ತೀರಾ ಸರಳವಾಗಿ ಅವರು ವಿವರಿಸುತ್ತಾರೆ.
ವಿವೇಕಾನಂದರು ಅಮೇರಿಕ ಮತ್ತು ಇಂಗ್ಲೆಂಡಿನ ಯಶಸ್ವಿ ಪ್ರವಾಸದ ನಂತರ ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿದರು. ಶೋಷಿತ ಶೂದ್ರರ ಬಗ್ಗೆ ಅವರು ರೂಪಿಸಿಕೊಂಡ ದೃಷ್ಟಿಕೋನವು ಅವರು ದೇಶ ವಿದೇಶಗಳಲ್ಲಿ ಪಡೆದುಕೊಂಡ ಜೀವನ ಪರಿಸ್ಥಿತಿಯ ಅನುಭವಗಳ ಅನುಸಂಧಾನದ ಫಲವಾಗಿದೆ ಎಂದು ಹೇಳಬಹುದು. ಕೆಳವರ್ಗದವರೇ ಆಗಿರುವ ಶಮಜೀವಿಗಳ ಬಗ್ಗೆ ಅವರು ಹೀಗೆ ಹೇಳುತ್ತಾರೆ. ಯಂತ್ರದ ರೀತಿಯಲ್ಲಿ ಅವರುಗಳು ನಿರಂತರವಾಗಿ, ಏಕಪ್ರಕಾರವಾಗಿ ಕೆಲಸ ಮಾಡುತ್ತಲೇ ಇದ್ದಾರೆ. ಬುದ್ಧಿವಂತ ಜನ ಅವರ ಶ್ರಮದ ಬಹುಪಾಲು ಫಲವನ್ನು ಕೊಂಡೊಯ್ಯುತ್ತಾರೆ. ಇದು ಪ್ರತಿಯೊಂದು ದೇಶದ ಕಥೆಯೂ ಆಗಿದೆ. ಆದರೆ ಈಗ ಕಾಲ ಬದಲಾಗುತ್ತಾ ಬರುತ್ತಿದೆ. ಕೆಳವರ್ಗದ ಈ ಜನ ಸತ್ಯವನ್ನು ನಿಧಾನವಾಗಿ ತಿಳಿದುಕೊಂಡು ಜಾಗೃತರಾಗುತ್ತಿದ್ದಾರೆ. ಅನ್ಯಾಯದ ವಿರುದ್ಧ ಒಂದುಗೂಡುತ್ತಿದ್ದಾರೆ ಮತ್ತು ತಮ್ಮ ನ್ಯಾಯ ಸಮ್ಮತ ಪಾಲನ್ನು ಪಡೆಯಲು ಕಟಿಬದ್ಧರಾಗುತ್ತಿದ್ದಾರೆ. ಯೂರೋಪ್, ಅಮೇರಿಕ ದೇಶಗಳ ಈ ಕೆಳವರ್ಗಗಳ ಜನ ಸಮೂಹ ಪ್ರಪ್ರಥಮ ಬಾರಿಗೆ ಇಂತಹ ಜಾಗೃತಿಯನ್ನೂ ಪಡೆದುಕೊಂಡು ತಮ್ಮ ಹೋರಾಟವನ್ನು ಪ್ರಾರಂಭಿಸಿದ್ದಾರೆ. ಭಾರತದಲ್ಲೂ ಇತ್ತೀಚೆಗೆ ಕೆಳಸ್ತರದ ಜನರಿಂದ ಬಹಳಷ್ಟು ಸಂಖ್ಯೆಯ ಮುಷ್ಕರಗಳು, ಪ್ರತಿಭಟನೆಗಳು ಬೆಳೆದು ಬರುತ್ತಿವೆ. ಮೇಲ್ವರ್ಗದ ಜನಕ್ಕೆ ಇನ್ನು ಮುಂದೆ ಕೆಳವರ್ಗದ ಜನರನ್ನು ದಮನಿಸಲು ಸಾಧ್ಯವಾಗಲಾರದು ಎಂದಿದ್ದಾರೆ.
ನವ ಭಾರತದ ಆಗಮನಕ್ಕಾಗಿ ಹಂಬಲಿಸುತ್ತಾ ಭಾರತ ಮಾತೆ ಎದ್ದು ಬರಲಿ, ಬಡ ರೈತರ ಗುಡಿಸಲುಗಳಿಂದ, ಮೀನುಗಾರರ ಜೋಪಡಿಗಳಿಂದ, ಸಮಗಾರರು ಮತ್ತು ಕಸಗುಡಿಸುವವರ ಕೇರಿಗಳಿಂದ, ಕಾರ್ಖಾನೆಗಳಿಂದ, ಮಾರಾಟದ ಮಳಿಗೆಗಳಿಂದ ಮೂಡಿ ಬರಲಿ ಎಂದು ಅವರು ಹಾರೈಸುತ್ತಾರೆ. ಸ್ವಾಮಿ ವಿವೇಕಾನಂದರ ಈ ಕೆಲವು ವಿಚಾರಗಳು ಅವರ ಬಗ್ಗೆ ಗೌರವವನ್ನು ಹೆಚ್ಚಿಸುತ್ತದೆ.
ಆದರೆ ಸ್ವಾಮಿ ವಿವೇಕಾನಂದರ ಮಹಾನ್ ಮಾನವತಾವಾದಿ ವ್ಯಕ್ತಿತ್ವವನ್ನು ತಿರುಚುವ, ಅವರನ್ನು ಪ್ರತಿಗಾಮಿ ಹಿಂದುತ್ವದ ವಕ್ತಾರನನ್ನಾಗಿಸುವ ಪ್ರಯತ್ನವನ್ನು ಸಂಘಪರಿವಾರದವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಅವರು ನಮ್ಮೆಲ್ಲರಂತೆ ಮನುಷ್ಯರೇ ಆಗಿದ್ದರೂ ಅವರನ್ನು `ದೇವರು ಮಾಡುವ ಪ್ರಯತ್ನ ನಡೆಯುತ್ತಿದೆ. ಇತಿಹಾಸದುದ್ದಕ್ಕೂ ಸನಾತನಿಗಳು ಇದನ್ನೇ ಮಾಡುತ್ತಾ ಬಂದಿದ್ದಾರೆ. ದೇವರ ಅಸ್ತಿತ್ವವನ್ನು ವೇದಗಳ ಶ್ರೇಷ್ಠತೆಯನ್ನು ನಿರಾಕರಿಸಿದ ಬುದ್ದನನ್ನೇ `ಅವತಾರ ಪುರುಷ ಎಂದು ಬಿಂಬಿಸಲಾಯಿತು. ಪುರೋಹಿತಶಾಹಿಯನ್ನು, ಜಾತಿ ಪದ್ಧತಿಯನ್ನು ವಿರೋಧಿಸಿದ ಬಸವಣ್ಣನನ್ನು`ನಂದಿ ಅವತಾರ ಎಂದು ಬಿಂಬಿಸಿ ಪೂಜಿಸುವಂತೆ ಮಾಡಲಾಗಿದೆ. ತಾನೊಬ್ಬ ನಾಸ್ತಿಕ ಎಂದು ಘೋಷಿಸಿಕೊಡ ಭಗತ್ ಸಿಂಗ್ ಅವರ ಹಾಗೂ ಹಿಂದೂ ಆಗಿ ಹುಟ್ಟಿದ್ದರೂ ಹಿಂದೂ ಆಗಿ ಸಾಯಲಾರೆ ಎಂದು ಘೋಷಿಸಿದ್ದ ಡಾ|| ಅಂಬೇಡ್ಕರ್ ಅವರ ಭಾವ ಚಿತ್ರಗಳನ್ನು ಹಾಕಿಕೊಂಡು ಸಂಘಪರಿವಾರದ ಸಂಘಟನೆಗಳು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರ ವಿಚಾರಗಳ ಕುರಿತು ನಮ್ಮ ವಸ್ತುನಿಷ್ಠವಾದ ಅಧ್ಯಯನ ಹೆಚ್ಚಾಗಬೇಕಾಗಿದೆ.
- ನಿತ್ಯಾನಂದಸ್ವಾಮಿ
Tuesday 21 February 2012
ವಿವೇಕಾನಂದರು ಕಂಡ ಧರ್ಮಗಳು ಮತ್ತು ಧರ್ಮಗ್ರಂಥಗಳು
ಧರ್ಮ ನಮಗೆ ಕೇವಲ ಯುಕ್ತಿಯ ಒಪ್ಪಿಗೆಮಾತು. ಮತ್ತೇನೂ ಅಲ್ಲ. ಯಾರು ಚೆನ್ನಾಗಿ ಮಾತನಾಡಬಲ್ಲರೋ ಅವರನ್ನು ಧಾರ್ಮಿಕರೆಂದು ಅನೇಕವೇಳೆ ಭಾವಿಸುವೆವು. ಆದರೆ ಧರ್ಮ ಅದಲ್ಲ. ಧರ್ಮವೆಂದರೆ ಕೇವಲ ಸುಂದರ ಪದಸಂಯೋಜನೆಯ ಮತ ಸಿದ್ಧಾಂತ ಎಂದು ತಿಳಿದಿರುವ ಮಾತಿನಮಲ್ಲರಿಂದ ಬಹುದೂರ ಹೋಗಬೇಕು.೧
ಯಾರಿಗೆ ಧರ್ಮವೆಂದರೆ ಯುಕ್ತಿಯ ಆಧಾರದಮೇಲೆ ಒಂದು ಒಪ್ಪಿಗೆ ಅಥವಾ ವಿರೋಧವನ್ನು ಸೂಚಿಸುವುದಾಗಿದೆಯೋ, ಯಾರಿಗೆ ತಮ್ಮ ಪುರೋಹಿತರು ಹೇಳುವ ಕೆಲವು ವಿಷಯಗಳನ್ನು ನಂಬುವುದಾಗಿದೆಯೋ, ಯಾರಿಗೆ ಧರ್ಮವೆಂದರೆ ತಮ್ಮ ಜನಾಂಗವೇ ನಂಬಿಕೊಂಡಿರುವ ಕೆಲವು ಭಾವನೆ ಮತ್ತು ಮೂಢನಂಬಿಕೆಗೆ ಸಂಪೂರ್ಣ ಒಪ್ಪಿಗೆಯನ್ನು ಕೊಡುವುದಾಗಿದೆಯೋ ಅವರು ಅಂತಹ ಭಾವನೆಗಳಿಂದ ಪಾರಾಗಬೇಕು. ಅವುಗಳನ್ನೆಲ್ಲ ಮೀರಿ ಹೋಗಬೇಕು. ಮಾನವ ಕೋಟಿಯನ್ನು ಬೆಳಕಿನೆಡೆಗೆ ಮುಂದುವರೆಯುತ್ತಿರುವ ಒಂದು ಬೃಹತ್ ಜೀವಿಗಳ ವ್ಯೂಹ ಎಂದು ಭಾವಿಸಬೇಕು.೨
ಧರ್ಮ ಬಾಯಿ ಮಾತಲ್ಲ; ನಂಬಿಕೆಯಲ್ಲ, ಸಿದ್ಧಾಂತವಲ್ಲ ಅಥವಾ ಅದೊಂದು ಕೋಮುವಾರು ಭಾವನೆಯೂ ಅಲ್ಲ. ಧರ್ಮ ಕೋಮುಗಳಲ್ಲೂ ಸಂಘಗಳಲ್ಲೂ ಜೀವಿಸಲಾರದು. ಆತ್ಮನಿಗೂ ದೇವರಿಗೂ ಇರುವ ಸಂಬಂಧ ಇದು. ಇದನ್ನು ಒಂದು ಸಂಘವಾಗಿ ಹೇಗೆ ಮಾಡಬಹುದು? ಆನಂತರ ಇದೊಂದು ವ್ಯಾಪಾರವಾಗುವುದು. ಎಲ್ಲಿ ವ್ಯಾಪಾರ ದೃಷ್ಟಿ ಇದೆಯೋ, ಧರ್ಮದಲ್ಲಿ ವ್ಯಾಪಾರ ನಿಯಮಗಳಿವೆಯೋ ಅಲ್ಲಿ ಅಧ್ಯಾತ್ಮಿಕತೆ ಕೊನೆಗಾಣುವುದು. ಧರ್ಮ ದೇವಸ್ಥಾನ ಕಟ್ಟುವುದರಲ್ಲಿಲ್ಲ. ಅಥವಾ ಸಾಮಾಜಿಕ ಪೂಜೆಗೆ ಹೋಗುವುದರಲ್ಲಿಯೂ ಇಲ್ಲ; ಅದು ಗ್ರಂಥದಲ್ಲಿಲ್ಲ. ಮಾತಿನಲ್ಲಿಯೂ ಇಲ್ಲ. ಉಪವಾಸದಲ್ಲಿಯೂ ಇಲ್ಲ ಅಥವಾ ಸಂಸ್ಥೆಯಲ್ಲಿಯೂ ಇಲ್ಲ. ೩
ಪ್ರತಿಯೊಂದು ಧರ್ಮವೂ ತಮ್ಮ ಸಿದ್ಧಾಂತವೇ ಸತ್ಯ ಎಂದು ಸಾಧಿಸುವುದು. ಇದು ಮಾತ್ರವಲ್ಲ, ಯಾರು ಇದನ್ನು ನಂಬುವುದಿಲ್ಲವೋ ಅವರು ಘೋರ ನರಕಕ್ಕೆ ಹೋಗಬೇಕು ಎನ್ನುವುದು. ತಮ್ಮಂತೆ ಇತರರೂ ನಂಬುವಂತೆ ಬಲಾತ್ಕಾರ ಮಾಡುವುದಕ್ಕೂ, ಬಲಪ್ರಯೋಗಕ್ಕೂ ಕೆಲವರು ಹಿಂಜರಿಯುವುದಿಲ್ಲ. ಇದು ದುಷ್ಟತನದಿಂದ ಅಲ್ಲ, ಮತಭ್ರಾಂತಿ ಎಂಬ ಮಾನವನ ಮಿದುಳಿನ ಒಂದು ಜಾಡ್ಯದ ಪರಿಣಾಮದಿಂದ. ಈ ಮತಭ್ರಾಂತರು ತುಂಬ ಪ್ರಾಮಾಣಿಕರು. ಮನುಷ್ಯರಲ್ಲೇ ನಿಷ್ಕಪಟಿಗಳು. ಆದರೆ ಅವರು ಹುಚ್ಚರಂತೆ ಜವಾಬ್ದಾರಿ ಇಲ್ಲದವರು. ಮತಭ್ರಾಂತಿ ಎಂಬುದೊಂದು ಬಹಳ ಅಪಾಯಕರವಾದ ರೋಗ. ಮಾನವನ ಹೀನಸ್ವಭಾವವೆಲ್ಲ ಇದರಿಂದ ಜಾಗೃತವಾಗುವುದು. ಕೋಷಿಷ್ಠರು, ಉದ್ವೇಗಪರವಶರಾಗಿ ವ್ಯಾಘ್ರಗಳಂತೆ ಆಗುವರು.೪
ಧರ್ಮದ ವಿಷಯದಲ್ಲಿ ಎರಡು ಅತಿರೇಕಗಳಿವೆ. ಒಬ್ಬನು ನಾಸ್ತಿಕ. ಮತ್ತೊಬ್ಬನು ಧರ್ಮಾಂಧ. ನಾಸ್ತಿಕನಲ್ಲಿ ಸ್ವಲ್ಪ ಒಳ್ಳೆಯದು ಇದೆ. ಆದರೆ ಧರ್ಮಾಂಧನಾದರೋ ಕೇವಲ ಸ್ವಾರ್ಥಿ. ೫
ದೇವರ ಹೆಸರಿನಲ್ಲಿ ಏತಕ್ಕೆ ಇಷ್ಟೊಂದು ಅಶಾಂತಿ, ಕಲಹ? ದೇವರ ಹೆಸರಿನಲ್ಲಿ ಹರಿಸಿರುವಷ್ಟು ರಕ್ತವನ್ನು ಬೇರಾವ ಕಾರಣದಿಂದಲೂ ಹರಿಸಿಲ್ಲ. ಏಕೆಂದರೆ ಜನರು ಧರ್ಮದ ಮೂಲಕ್ಕೆ ಹೋಗಲಿಲ್ಲ. ಅವರ ಪೂರ್ವಿಕ ಆಚಾರ ವ್ಯವಹಾರಗಳಿಗೆ ಒಪ್ಪಿಗೆ ನೀಡುವುದರಲ್ಲಿಯೇ ತೃಪ್ತರಾಗಿದ್ದರು. ಉಳಿದವರು ಕೂಡ ಹಾಗೆಯೇ ಮಾಡಬೇಕೆಂದು ತಿಳಿದಿದ್ದರು. ಕಪಟಿಯಾಗುವುದಕ್ಕಿಂತ ಖಂಡಿತವಾಗಿಯೂ ನಾಸ್ತಿಕನಾಗಿರುವುದು ಮೇಲು.೬
ನನ್ನ ದೃಷ್ಟಿಯಲ್ಲಿ ಗ್ರಂಥಗಳು ಒಳ್ಳೆಯದಕ್ಕಿಂತ ಹೆಚ್ಚು ಕೆಡುಕನ್ನು ಉಂಟು ಮಾಡಿವೆ. ಹಲವು ದೋಷಯುಕ್ತ ಸಿದ್ಧಾಂತಗಳಿಗೆ ಅವೇ ಕಾರಣ. ಸಿದ್ಧಾಂತಗಳೆಲ್ಲ ಗ್ರಂಥದಿಂದ ಬರುವುವು. ಮತಾಂಧತೆ, ಅನ್ಯಧರ್ಮೀಯರನ್ನು ಹಿಂಸಿಸುವುದು, ಇವಕ್ಕೆಲ್ಲ ಗ್ರಂಥಗಳೇ ಕಾರಣ. ಇಂದಿನ ಕಾಲದಲ್ಲಿ ಗ್ರಂಥಗಳು ಎಲ್ಲ ಕಡೆಯಲ್ಲಿಯೂ ಕಪಟಿಗಳನ್ನು ಉಂಟುಮಾಡುತ್ತಿರುವುದು. ಹೊರದೇಶಗಳಲ್ಲಿಯೂ ಇರುವ ಕಪಟಿಗಳ ಸಂಖ್ಯೆಯನ್ನು ನೋಡಿ ಆಶ್ಚರ್ಯವಾಗುತ್ತದೆ.೭
೧. ವಿವೇಕಾನಂದರ ಕೃತಿಶ್ರೇಣಿ ಸಂಪುಟ ೩, ಪುಟ ಸಂಖ್ಯೆ ೧೧೩
೨. ಸಂಪುಟ ೪, ಪುಟ ಸಂಖ್ಯೆ ೪೪೬
೩. ಸಂಪುಟ ೨, ಪುಟ ಸಂಖ್ಯೆ ೩೯೭
೪. ಸಂಪುಟ ೩, ಪುಟ ಸಂಖ್ಯೆ ೨೫೪
೫. ಸಂಪುಟ ೧೦, ಪುಟ ಸಂಖ್ಯೆ ೫೪೦
೬. ಸಂಪುಟ ೧, ಪುಟ ಸಂಖ್ಯೆ ೧೭೫-೧೭೬
೭. ಸಂಪುಟ ೫, ಪುಟ ಸಂಖ್ಯೆ ೪೨೦
Monday 20 February 2012
Sunday 19 February 2012
ಪಠ್ಯ ಬದಲಾವಣೆ : ಮುಗ್ಧ ಮನಸುಗಳಿಗೆ ವಿಷ ತುಂಬುವ ಯತ್ನ
ಕರ್ನಾಟಕ ರಾಜ್ಯದ ಪ್ರಗ್ನಾವಂತ ಜನತೆ ನಿರೀಕ್ಷಿಸುತ್ತಿದ್ದಂತೆ ರಾಜ್ಯ ಬಿಜೆಪಿ ಸರ್ಕಾರವು ಶಾಲಾ ಪಠ್ಯ ಪುಸ್ತಕಗಳನ್ನು ಆರೆಸೆಸ್ಸಿನ ಮತಾಂಧ, ಜಾತಿವಾದಿ, ಪ್ರಗತಿ ವಿರೋಧಿ, ಕಂದಾಚಾರಿ ವಿಚಾರಗಳನ್ನು ತುರುಕುವ ಮೂಲಕ ಪಠ್ಯ ಪುಸ್ತಗಳನ್ನು ವಿಕೃತಗೊಳಿಸಿರುವ ಪ್ರಕರಣ ಬಯಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಜಾರಿಗೆ ತರುವ ಉದ್ದೇಶದೊಂದಿಗೆ 5ನೇ ತರಗತಿಯ ಮತ್ತು 8ನೇ ತರಗತಿಯ ಪಠ್ಯ ಪುಸ್ತಕಗಳ ಕರಡನ್ನು ಅಂತಿಮಗೊಳಿಸಲಾಗಿದೆ. ರಾಜ್ಯ ಸಚಿವ ಸಂಪುಟವು ಅದಕ್ಕೆ ಅನುಮೊದನೆಯನ್ನೂ ನೀಡಿದೆ. ಅಂದರೆ ರಾಜ್ಯದ ಜನತೆ ತೀವ್ರವಾಗಿ ವಿರೋಧಿಸದಿದ್ದರೆ ಈ ವಿಷಮಯ ಪಠ್ಯಗಳು ಜಾರಿಗೆ ಬಂದು ನಮ್ಮ ಮಕ್ಕಳ ಮನಸ್ಸುಗಳು ವಿಷಪೂರಿತ ಗೊಳ್ಳುವ ಅಪಾಯ ಕಾದಿದೆ.
ಈ ಪಠ್ಯಗಳನ್ನು ನೋಡಿದರೆ ಸಂಘ ಪರಿವಾರ ಇಂತಹ ಪಠ್ಯಗಳಲ್ಲಿ ಏನೆಲ್ಲಾ ತುಂಬಲು ತಹತಹಿಸುತ್ತದೆಯೋ ಅದೆಲ್ಲವನ್ನೂ ತುಂಬಲು ಸಾಧ್ಯವಾಗಿಲ್ಲದೇ ಇರಬಹುದು ಅನಿಸುತ್ತದೆ. ಬಹುಶ: ಅದಕ್ಕೆ ಪಠ್ಯಪುಸ್ತಕ ಸಮಿತಿಯೊಳಗಿನ ವಿರೋಧವೂ ಕಾರಣ ವಾಗಿರಬಹುದು. ಆದರೆ ಅದರ ಅರ್ಥ ಈ ಪಠ್ಯದೊಳಗೆ ಸುರಿಯಲಾಗಿರುವ ವಿಷ ಕಡಿಮೆ ಅಪಾಯಕಾರಿ ಅಂತ ಖಂಡಿತ ಅಲ್ಲ.
ಮುಸ್ಲಿಂ ದ್ವೇಷ
ಒಂದು ಅರ್ಥದಲ್ಲಿ ಸಂಘ ಪರಿವಾರದ ಚಾಲಕ ಶಕ್ತಿ, ಸಂಘ ಪರಿವಾರದ ಉಸಿರು ಮುಸ್ಲಿಂ ದ್ವೇಷ. ಮತ್ತು ಅಲ್ಪಸಂಖ್ಯಾತರ ದ್ವೇಷ. ಮುಗ್ದ ಮಕ್ಕಳ ಮನಸ್ಸಿನಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಬಗೆಗೆ ಸಂಶಯ ಮೂಡಿಸುವ, ದ್ವೇಷವನ್ನು ಪ್ರೇರೆಪಿಸುವುದಕ್ಕೆ ಪೂರಕವಾಗಬಹುದಾದ ಹಲವು ಪೂರ್ವಗ್ರಹ ಪೀಡಿತವಾದ ವಿಚಾರಗಳನ್ನು ತುರುಕಲಾಗಿದೆ. ವಿಷಯಗಳ ನಿರೂಪಣೆಯಲ್ಲಿ ಪಕ್ಷಪಾತವನ್ನು ತೋರಲಾಗಿದೆ.
5ನೇ ತರಗತಿಯ ಸಮಾಜ ವಿಗ್ನಾನ ಪಠ್ಯದ ಈ ಉದಾಹರಣೆಗಳನ್ನು ನೋಡಿ.
ಈ ಪಠ್ಯದ ಮೊದಲ ಪಾಠವು ರಾಜ್ಯದ ಎಲ್ಲ ಕಡೆಗೂ ಒಂದೇ ಇರುವುದಿಲ್ಲ. ಆಡಳಿತಾತ್ಮಕ ವಿಭಾಗವಾದ ಬೆಂಗಳೂರು ವಿಭಾಗ, ಮೈಸೂರು ವಿಭಾಗ, ಬೆಳಗಾಂ ವಿಭಾಗ, ಗುಬ್ಲರ್ಗಾ ವಿಭಾಗಗಳಿವೆ. ಪ್ರತಿ ವಿಭಾಗದ ವಿದ್ಯಾರ್ಥಿಗಳು ತಮ್ಮ ಸುತ್ತ ಮುತ್ತಲ, ಸ್ಥಳೀಯ ಸಾಮಾಜಿಕ, ಆರ್ಥಿಕ, ಐತಿಹಾಸಿಕ, ಸಾಂಸ್ಕೃತಿಕ ಇತಿಹಾಸ, ವರ್ತಮಾನ, ಸ್ಥಿತಿಗತಿಗಳನ್ನು ಪರಿಚಯಿಸಿಕೊಡುವ ಉದ್ದೇಶವಿದೆ. ಇದರಿಂದಾಗಿ ಮೊದಲ ಪಾಠದಲ್ಲಿ ವಿಭಾಗದಿದಂದ ವಿಭಾಗಕ್ಕೆ ಬಿನ್ನತೆ ಇದೆ. ನಂತರದ ಪಾಠಗಳು ಇಲ್ಲರಿಗೂ ಒಂದೇ.
ಮೈಸೂರು ವಿಭಾಗದಲ್ಲಿನ ಮೊದಲ ಪಾಠದಲ್ಲಿ ಮೈಸೂರು ಒಡೆಯರನ್ನು ಹೊಗಳುವಾಗಿನ ಉತ್ಸಾಹ ಟಿಪ್ಪು, ಹೈದರಾಲಿಗಳ ವಿಚಾರ ಬಂದಾಗ ಉಡುಗಿ ಹೋಗುತ್ತದೆ. !
ಒಡೆಯರ ವಿಚಾರವಾಗಿ ಪ್ರಾರಂಭದ ಒಡೆಯರ ರಾಜರಲ್ಲಿ ಚಿಕ್ಕದೇವರಾಜನು ಅತ್ಯಂತ ಖ್ಯಾತಿ ಪಡೆದವನು. 'ಕರ್ನಾಟಕ ಚಕ್ರವತಿ' ಎಂಬ ಬಿರುದನ್ನು ಧರಿಸಿದ ಈತನು ರಾಜ್ಯವನ್ನು ವಿಸ್ತರಣೆ ಮಾಡಿದನು. ಈತನ ಆಳ್ವಿಕೆಯ ಕಾಲದಲ್ಲಿ ಮೈಸೂರು ಸಂಪದ್ಭರಿತವಾಯಿತು.''
``ಮೈಸೂರು ರಾಜ್ಯವನ್ನಾಳಿದ ಆ ಮೇಲಿನ ರಾಜರಲ್ಲಿ ಗಣನೀಯರಾದವರೆಂದರೆ ಮುಮ್ಮಡಿ ಕೃಷ್ಣರಾಜ ಒಡೆಯರು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರು. ಇವರಿಬ್ಬರೂ ಸಾಹಿತ್ಯ ಮತ್ತು ಕಲೆಗಳಿಗೆ ಅಪಾರ ಪ್ರೋತ್ಸಾಹ ನೀಡಿದರು.'' ಎನ್ನುವ ಪಠ್ಯವು ಕನರ್ಾಟಕ ಅಭಿವೃದ್ದಿಗೆ ಹಲವು ಅಮೋಘ ಕೊಡುಗೆಗಳನ್ನು ನೀಡಿದ, ಆಧುನಿಕ ಮೈಸೂರಿನ ಅಭಿವೃದ್ದಿಗೆ ಅಡಿಪಾಯವನ್ನು ಹಾಕಿದ ಹೈದರಾಲಿ, ಟಿಪ್ಪುವಿನ ಯಾವ ಕೊಡುಗೆಗಳನ್ನೂ ಪ್ರಸ್ತಾಪಿಸುವುದಿಲ್ಲ. ಸಾಮ್ರಾಜ್ಯಶಾಹಿ ಬ್ರಿಟೀಷರನ್ನು ದೇಶದಿಂದ ಓಡಿಸಲು ತನ್ನ ಮಕ್ಕಳನ್ನು ಒತ್ತೆ ಇಟ್ಟು ಕೊನೆಗೆ ತನ್ನ ಪ್ರಾಣವನ್ನೇ ಪಣವಾಗಿರಿಸಿ ಇಟ್ಟು ಹೋರಾಟ ನಡೆಸಿದ ಟಿಪ್ಪುವಿನ ಶೌರ್ಯ, ಧೀಮಂತಿಕೆ ದೇಶಪ್ರೇಮ ಬಗೆಗೂ ಹೇಳದೇ ``ಚಿಕ್ಕದೇವರಾಯನ ಮರಣಾನಂತರ ಆರು ದಶಕಗಳ ಕಾಲ ದುರ್ಬಲ ರಾಜರುಗಳೇ ಅಧಿಕಾರದಲ್ಲಿದ್ದರು. ಈ ಅವಧಿಯಲ್ಲಿ ದಳವಾಯಿಗಳೆಂದು ಕರೆಯಲಾಗುವ ಸೇನಾಪತಿಗಳು ರಾಜರ ಪರವಾಗಿ ಆಳ್ವಿಕೆ ನಡೆಸುತ್ತಿದ್ದರು. ಮುಂದೆ 1761ರಲ್ಲಿ ರಾಜಧಾನಿಯಲ್ಲಿ ಸೈನಿಕ ಬಂಡಾಯ ಕಾಣಿಸಿಕೊಂಡಾಗ, ಹೈದರಾಲಿಯು ದಳವಾಯಿ ನಂಜರಾಜನನ್ನು ನಿವೃತ್ತಿಗೊಳಿಸಿ ತಾನೇ ಅಧಿಕಾರವಹಿಸಿಕೊಂಡನು. 1763ರಿಂದ 1799ರವರೆಗೆ ಮೈಸೂರು ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಮಧ್ಯಂತರ ಆಳ್ವಿಕೆಯಲ್ಲಿತ್ತು. ಇದೇ ವೇಳೆ ಭಾರತದಲ್ಲಿ ಇಂಗ್ಲಿಷರು ರಾಜಕೀಯ ಶಕ್ತಿಯಾಗಿ ತಲೆಯೆತ್ತಿದ್ದರು. 1799ರಲ್ಲಿ ಅವರು ಟಿಪ್ಪುಸುಲ್ತಾನನ್ನು ಸೋಲಿಸಿ ಮೈಸೂರು ರಾಜ್ಯವನ್ನು ತಮ್ಮ ಅಧಿಕಾರದಡಿಯಲ್ಲಿ ತಂದರು.'' ಎಂದು ಹೇಳಿ ಕೈ ತೊಳೆದುಕೊಳ್ಳುತ್ತದೆ. ಮೈಸೂರು ವಿಭಾಗದಲ್ಲೆ ಹೈದರಾಲಿ, ಟಿಪ್ಪುಗಳಿಗೆ ಈ ಗತಿಯಾದರೆ ಇನ್ನು ಬೇರೆ ವಿಭಾಗ ಪಠ್ಯದಲ್ಲಿ ಕೇಳುವುದೇನು ? ಚೆಲುವ ಕನ್ನಡ ನಾಡು ಎಂಬ ಎಲ್ಲರಿಗೂ ಸಾಮಾನ್ಯವಾದ ಭಾಗದಲ್ಲಿ ಟಿಪ್ಪುವಿಗೆ `ಮೈಸೂರು ಹುಲಿ' ಎಂಬ ಬಿರುದು ತೊಡಿಸಿರುವಷ್ಟಕ್ಕೆ ನಾವು ತೃಪ್ತಿ ಪಡಬೇಕಾಗಿದೆ.
ಗುಲಬರ್ಗಾ ವಿಭಾಗದ ಪಠ್ಯದ ಮೊದಲ ಪಾಠದಲ್ಲಿ `ಹೈದರಾಬಾದ್ ವಿಮೋಚನಾ ಸಂಗ್ರಾಮ' ಎಂಬ ಒಂದು ಶೀರ್ಷಿಕೆಯಲ್ಲಿ ಹೈದರಾಬಾದ್ ನಿಜಾಮನ ವಿರುದ್ದದ ಹೋರಾಟದ ಧೀರ್ಘ ವಿವರಣೆ ಇದೆ.
ನಿಜಾಮನ ಆಡಳಿತ ಕ್ರೂರವಾಗಿತ್ತು ಎಂಬುದು ನಿಜವೇ. ನಿಜಾಮನ ಆಡಳಿತ ಎಂದರೆ ಒಬ್ಬ ಪಾಳೇಯಗಾರಿ ಸುಲಿಗೆಕೋರನ ಆಡಳಿತ. ಮತಾಂಧರೂ ಆಗಿದ್ದ ನಿಜಾಮನ ಬಂಟರ, ಸೈನ್ಯದ ದೌಜನ್ಯಗಳನ್ನು ವಿವರಿಸುವಾಗ ಅಲ್ಲಿ ತೋರಬೇಕಾದ ಎಚ್ಚರವನ್ನು ಸಮ ಚಿತ್ತದ ವಿವೇಕವನ್ನು ತೋರದೇ ಅದು ಮುಸ್ಲಿಂ ಆಡಳಿತಗಾರರು ಹಾಗೂ ಹಿಂದೂ ಪ್ರಜೆಗಳ ನಡುವಿನ ಹೋರಾಟ ಎಂಬಂತೆ ಚಿತ್ರಿಸಲಾಗಿದೆ.
ದೇಶಕ್ಕೆ ಸ್ವಾತಂತ್ಯ್ರ ಸಿಗುವ ಕಾಲಘಟ್ಟದ ಬೆಳವಣಿಗೆಗೆಗಳ ಕುರಿತು
``ನಿಜಾಮ ಭಾರತ ಒಕ್ಕೂಟದಿಂದ ಹೊರಗುಳಿದು ಸ್ವತಂತ್ರ ಆಳ್ವಿಕೆ ನಡೆಸಲು ನಿರ್ಧರಿಸಿದನು.'' ಎನ್ನುವ ಪಠ್ಯವುಮೈಸೂರು ಒಡೆಯರ ಕುರಿತ ಪಾಠದಲ್ಲಿ ಮಾತ್ರ.
``1947 ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾದಾಗ ಮೈಸೂರು ರಾಜ್ಯವು ಭಾರತ ಗಣರಾಜ್ಯದಲ್ಲಿ ಸೇರ್ಪಡೆಗೊಂಡಿತು'' ಎಂದು ಕೈ ತೊಳೆದುಕೊಳ್ಳುತ್ತದೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಕೂಡಲೇ ಮೈಸೂರು ಮಹಾರಾಜರೇನು ಓಡೋಡಿ ಹೋಗಿ ಭಾರತ ಒಕ್ಕೂಟವನ್ನು ಸೇರಲಿಲ್ಲ. ಅವರೂ ಕೂಡ ಪ್ರತ್ಯೇಕ 'ಮೈಸೂರು ರಾಷ್ಟ್ರ'ವಾಗಿ ಉಳಿದುಕೊಳ್ಳುವ ಯತ್ನ ಮಾಡಿದ್ದರು. ಜನತೆಯ ಅಭಿಮತ ಅದಕ್ಕೆ ಪರವಾಗಿರಲಿಲ್ಲ. ಜನತೆಯು ಆ ಧೋರಣೆಯನ್ನು ಖಂಡಿಸಿ ಹೋರಾಟ ನಡೆಸಿದರು. ಅದರಿಂದಾಗಿ ಮೈಸೂರು ಮಹಾರಾಜರು ಭಾರತ ಒಕ್ಕೂಟಕ್ಕೆ ಸೇರಲು ಒಪ್ಪಲೇ ಬೇಕಾಯಿತು. ಇದು ಜಗಜಾಹೀರಾಗಿರುವ ಇತಿಹಾಸ. ಇಂಥಾ ಇತಿಹಾಸವನ್ನು ತಿರುಚುವ ಸಂಘ ಪರಿವಾರದ ಭಂಡತನವನ್ನು ಮೆಚ್ಚಲೇ ಬೇಕು.
ಒಡೆಯರು ಹಿಂದೂಗಳು ಹಾಗಾಗಿ ಅವರು ದೇಶದ ಪರ, ನಿಜಾಮ ಮುಸ್ಲಿಂ ಹಾಗಾಗಿ ಆತ ದೇಶ ವಿರೋಧಿ ಎಂದು ಬಿಂಬಿಸುವುದಲ್ಲವೇ ಈ ಬಗೆಯ ನಿರೂಪಣೆಯ ಉದ್ದೇಶ !?.
ಮೈಸೂರಿನಲ್ಲಿ ರಾಜರ ಆಡಳಿತ ಹೋಗಿ ಜವಾಬ್ದಾರಿ ಸರ್ಕಾರ ಅಂದರೆ ಚುನಾಯಿತ ಸರ್ಕಾರ ಬರಬೇಕೆಂಬುದಕ್ಕಾಗಿಯೂ ಈ ಮೈಸೂರು ಜನತೆ ದೊಡ್ಡ ಹೋರಾಟ ಮಾಡಬೇಕಾಗಿ ಬಂದಿತ್ತು ಎಂಬ ಕೇವಲ 65 ವರ್ಷಗಳ ಹಿಂದಿನ ಇತಿಹಾಸ ಜನರ ಮನಸ್ಸಿನಿಂದ ಅಳಿಸಿ ಹೋಗಲು ಸಾಧ್ಯವೇ?
ದತ್ತಾತ್ರೇಯ ಪೀಠ ಮಾತ್ರ.... ಬಾಬಾ ಬುಡನ್ ಇಲ್ಲ....
``ಬಾಬಾಬುಡನ್ ಗಿರಿ: ಇದು ಪಶ್ಚಿಮ ಘಟ್ಟದ ಒಂದು ಭಾಗ. ಇದನ್ನು ಚಂದ್ರದ್ರೋಣ ಪರ್ವತ ಎಂದು ಕರೆಯುತ್ತಾರೆ. ಇಲ್ಲಿ ಅನೇಕ ಗಿಡ ಮೂಲಿಕೆಗಳು ದೊರೆಯುತ್ತವೆ. ಇದರ ನೆತ್ತಿಯಲ್ಲಿರುವ ಗುಹೆಯಲ್ಲಿ ದತ್ತಾತ್ರೇಯ ಪೀಠವಿದೆ. ಇಲ್ಲಿಗೆ ಸಹಸ್ರಾರು ಭಕ್ತರು ಬರುತ್ತಾರೆ.'' ಇದು ಈ ಪಠ್ಯವು ನಮ್ಮ ನಾಡಿನ ಹೆಮ್ಮೆಯ ಕೋಮು ಸೌಹಾರ್ದ ಪರಂಪರೆಯ ತಾಣದ ಬಗೆಗೆ ಹೇಳುತ್ತಿರುವ ಮಾತು. `ಸರ್ವ ಜನಾಂಗದ ಶಾಂತಿಯ ತೋಟ' ಎಂಬ ಕವಿವಾಣಿಯನ್ನು ನೆನಪಿಸುವಂತಹ_ ನೂರಾರು ವರ್ಷಗಳಿಂದಲೂ ಜಾತಿ ಭೇದವಿಲ್ಲದೇ ಹಿಂದೂ-ಮುಸ್ಲಿಂ ಎಲ್ಲಾ ಜನರು ಭಕ್ತಿ, ಶ್ರಧ್ದೆಯಿಂದ ನಡೆದುಕೊಳ್ಳುತ್ತಿರುವ ಒಂದು ಶ್ರದ್ದಾಕೇಂದ್ರವನ್ನು ಹಿಂದುತ್ವವಾದಿ, ವೈದಿಕ ಪುರೋಹಿತಶಾಹಿ ಕೇಂದ್ರವನ್ನಾಗಿಸುವ ಸಂಚಿಗೆ ಪೂರಕವಾಗಿ ನಿರೂಪಿಸಿರುವ ಪಠ್ಯವಿದು. ಬಾಬಾಬುಡನ್ ಗಿರಿ ಪ್ರಶ್ನೆಯನ್ನು `ಕನರ್ಾಟಕದ ಅಯೋಧ್ಯೆ'ಯನ್ನಾಗಿ ಸಂಘ ಪರಿವಾರ ಬಳಸುತ್ತಿದೆ ಎಂಬುದನ್ನು ದೇಶದ ಜನರು ಗಮನಿಸುತ್ತಿದೆ. ಈ ವಿವಾದವನ್ನು ಬಳಿಸಿ ಕರ್ನಾಟಕವನ್ನು `ಗುಜರಾತ್ ಮಾಡುತ್ತೇವೆ' ಎಂದೆಲ್ಲಾ ಆರೆಸ್ಸೆಸ್-ಬಿಜೆಪಿ ಮುಖಂಡರು ಚೀರಿದ್ದು ಜನರ ಮನಸ್ಸಿನಲ್ಲಿ ಇನ್ನೂ ಹಸಿಯಾಗಿದೆ. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕೋಮುವಾದಿಗಳ ಈ ಮತಾಂಧ ರಾಜಕೀಯದ ವಿಕೃತ ರೂಪವಾಗಿ ಈ ವಿಷಯ ಪಠ್ಯದಲ್ಲಿ ಹೀಗೆ ನಿರೂಪಿತವಾಗಿದೆ ಎನ್ನುವುದು ಜನ ಸಮುದಾಯಗಳ ನಡುವೆ ಐಕ್ಯತೆ, ಶಾಂತಿ ಸೌಹಾರ್ದತೆಯನ್ನು ಬಯಸುವ ಎಲ್ಲರ ಕಣ್ಣು ತೆರೆಸ ಬೇಕಿದೆ.
ಇದೇ ಮೈಸೂರು ಭಾಗವನ್ನು ಪರಿಚಯಿಸುವ ಪಠ್ಯದ `ಮರೆಯಲಾಗದ ಮಹಾನುಭಾವರು' ಎಂಬ ಭಾಗದಲ್ಲಿ "ತಗಡೂರು ರಾಮಚಂದ್ರ ರಾವ್ ಅವರು ಅಸ್ಪೃಶ್ಯತೆಯ ವಿರುದ್ದ ಹೋರಾಡಿದರಲ್ಲದೆ ಕ್ರೈಸ್ತರಾಗಿ ಮತಾಂತರಗೊಂಡ ಬಡವರನ್ನು ಮತ್ತೆ ತಮ್ಮ ಮತಗಳಿಗೆ ಸೇರುವಂತೆ ಮಾಡಿದರು.'' ಎನ್ನುತ್ತದೆ. ಅಂದರೆ ಬಡವರನ್ನು ಆಮಿಷ ಒಡ್ಡಿ ಮತಾಂತರ ಮಾಡಲಾಗಿತ್ತು. ಅವರನ್ನು ಮರಳಿ ಕರೆ ತರಲಾಯಿತು ಎಂಬ ಅರ್ಥವನ್ನು ತರುವುದೇ ಈ ಮಾತುಗಳ ಮೂಲಕ ವ್ಯಕ್ತಗೊಳಿಸುವ ಅರ್ಥ.
ಮೂಢ ನಂಬಿಕೆ ಅಗ್ನಾನಗಳ ಬಿತ್ತನೆ
ಗಂಗಾವತಿ ತಾಲ್ಲೂಕನ್ನು ಪರಿಚಯಿಸುವ ಭಾಗದಲ್ಲಿ ``ಗಂಗಾವತಿ ತಾಲ್ಲೂಕಿನ ಅಂಜನಾದ್ರಿ (ಕಿಷ್ಕಿಂದೆ) ಪೌರಾಣಿಕವಾಗಿ ಪ್ರಸಿದ್ದವಾಗಿದೆ. ವೀರಾಗ್ರೇಸರ, ರಾಮ ಭಕ್ತ, ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾದ ಹನುಮಂತನು ಹುಟ್ಟಿದ್ದು, ರಾಮಾಯಣದ ಸುಂದರಕಾಂಡ ನಡೆದದ್ದು ಇಲ್ಲಿಯೇ.'' ಎನ್ನುತ್ತದೆ ಪಠ್ಯ. ಆಹಾ!! ಏನು ವೈಚಾರಿಕತೆ. ಏನು ವೈಗ್ನಾನಿಕ ನಿರೂಪಣೆ!? ಮುಗ್ದ ಜನತೆ ಹಾಗೆ ನಂಬಿರಬಹುದು. ಆದರೆ ಪಠ್ಯ ಪುಸ್ತಕವೊಂದು `ಜನರಲ್ಲಿ ಇಂತಹ ನಂಬಿಕೆ ಇದೆ' ಎಂದೋ ಅಥವಾ 'ಇಂತಹ ಪ್ರತೀತಿ ಇದೆ' ಅಂತಲೋ ಹೇಳುವುದು ಬಿಟ್ಟು, ಪುರಾಣದ ಕುರಿತಾದ ಜನರ ಆಧಾರವಿಲ್ಲದ ನಂಬಿಕೆಗಳನ್ನು ಐತಿಹಾಸಿಕ ಸತ್ಯ ಎಂದು ನಿರೂಪಿಸಲು ಹೊರಟಿದೆ.
ಇಂತಹ ನಿರೂಪಣೆಗೆ ಇದೊಂದೇ ಉದಾಹರಣೆಯಲ್ಲ. ಇಂತಹ ಇನ್ನೂ ಹಲವಾರು ಉದಾಹರಣೆಗಳು ಪಠ್ಯದಲ್ಲಿವೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಪರಿಚಯಿಸುವ ಭಾಗದಲ್ಲಿ ಕಂಡು ಬರುವ ಈ ಬರಹವನ್ನು ನೋಡಿ.
* "ಕದ್ರಿ ಮಂಜುನಾಥ ದೇವಸ್ಥಾನ:
ಶಿವನು ಪರಶು ರಾಮನಿಗೆ ಮಂಜುನಾಥ ನಾಗಿ ಒಲಿದು, ಕದಲೀವನ ಮಧ್ಯದಲ್ಲಿ ಜ್ಯೋತಿಲರ್ಿಂಗ ಸ್ವರೂಪವಾಗಿ ಅವತರಿಸಿದ ಪುಣ್ಯ ಕ್ಷೇತ್ರವೇ ಕದ್ರಿ.'' ಎನ್ನುತ್ತದೆ ಪಠ್ಯ.
ಅಖಂಡ `ಹಿಂದೂ ರಾಷ್ಟ್ರ'ದ ಕಣ್ಣೋಟವೂ ಯುದ್ದೋನ್ಮಾದ ಬಿತ್ತುವ ದುಷ್ಟ ಅಜೆಂಡಾವೂ `ಸಾಂಸ್ಕೃತಿಕ ಭಾರತ' ಎಂಬ ತಲೆ ಬರಹದ ಅಡಿಯಲ್ಲಿ 5 ಮತ್ತು 8 ನೇ ತರಗತಿಗಳ ಎರಡೂ ಪಠ್ಯಪುಸ್ತಕಗಳಲ್ಲಿ ಒಂದು ಭೂಪಟವನ್ನು ನೀಡಲಾಗಿದೆ. ಈ ಭೂಪಟವು ಭಾರತದ ನೆರೆ ಹೊರೆಯ ದೇಶಗಳಾದ ಆಫಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಬಮರ್ಾ, ಶ್ರೀಲಂಕ ಅಲ್ಲದೇ ಟಿಬೆಟ್ ಮುಂತಾದ ಎಲ್ಲವನ್ನೂ ಭಾರತದ ಭಾಗವಾಗಿ ತೋರಿಸುತ್ತಿದೆ. ಎಳೆಯ ವಯಸ್ಸಿನ ಮಕ್ಕಳ ಮನಸ್ಸಿನಲ್ಲಿ ಇಂತಹ ಭಾವನೆಗಳನ್ನು ಬಿತ್ತಿದರೆ ಮುಂದೆ ಬೆಳೆದು ದೊಡ್ಡವರಾದಾಗ ಅಂತಹ ಮಕ್ಕಳ ಮನೋಭಾವ ಏನಾಗಿರುತ್ತದೆ ಎಂದು ತುಂಬಾ ಎಚ್ಚರದಿಂದ ಯೋಚಿಸಬೇಕಿದೆ.
ಆರೆಸ್ಸೆಸ್ನ ಭೌದ್ದಿಕ ತರಬೇತಿ ಶಿಬಿರ, ಸಂಘಟನಾ ತರಬೇತಿ ಶಿಬಿರಗಳಲ್ಲಿ ಶಿಬಿರಾಥರ್ಿಗಳಿಗೆ ಯುದ್ಧದ ಆಟಗಳನ್ನು ಆಡಿಸ ಲಾಗುತ್ತದೆ. ಯುವಕರನ್ನು (ಯುವತಿಯರು ಇರುವುದಿಲ್ಲ... ಅವರಿಗೇನಿದ್ದರೂ ಈ `ವೀರ ಕೇಸರಿ'ಗಳಿಗೆ ಆರತಿ ಬೆಳಗುವ ಕೆಲಸ ಅಷ್ಟೆ.)ಎರಡು ಗುಂಪುಗಳಾಗಿಸಿ ಅದಕ್ಕೆ ಬೇರೆ ಬೇರೆ ದೇಶಗಳ ತಂಡಗಳು ತಾವು ಎಂಬಂತಹ ಭಾವನೆಗಳನ್ನು ಬಿತ್ತಿ, `ಶತ್ರು' ಸಂಹಾರದ (ಬೆನ್ನನ್ನು ನೆಲಕ್ಕೆ ತಾಗಿಸುವ) ಸವಾಲು ಒಡ್ಡಲಾಗುತ್ತದೆ. ಆಟದ ನಡುವೆ ಉದ್ರೇಕಕಾರಿ ಘೋಷಣೆಗಳು, ಯುದ್ದೋನ್ಮಾದವನ್ನು ಬಡಿದೆಬ್ಬಿಸುವ ಕೂಗಾಟ, ಕಿರುಚಾಟಗಳು ಇರುತ್ತವೆ. ಅಂತರಾಷ್ಟ್ರೀಯ ಕ್ರೀಡೆಗಳು ಅಥವಾ ವಿವಾದಗಳು ಎದ್ದು ಬಂದಾಗ ನಮ್ಮ ಯುವಕರು ತಾಳ್ಮೆಯಿಂದ, ಸಾವಧಾನತೆಯಿಂದ ವತರ್ಿಸಬೇಕಾದ ಎಷ್ಟೋ ಸಂದರ್ಭಗಳಲ್ಲಿ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡು ಕ್ರೂರ ಮೃಗಗಳಂತೆ ಆಡುವ ಸಂದರ್ಭವನ್ನು ನೋಡುತ್ತೇವೆ. ಈ ಪ್ರವೃತ್ತಿಯ ಹಿಂದೆ ಸಂಘ ಪರಿವಾರದ ಇಂತಹ `ಆಟ'ಗಳ ಪ್ರಭಾವ ವ್ಯಾಪಕವಾಗಿರುತ್ತದೆ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಇನ್ನು ಪಠ್ಯ ಪುಸ್ತಕದಲ್ಲಿಯೇ ಇಂತಹ `ಸ್ಪೋಟಕ' ವಿಚಾರಗಳನ್ನು ತುಂಬುವುದರ `ಆಟ'ಗಳ ಅಪಾಯದ ಬಗೆಗೆ ಎಷ್ಟು ಹೇಳಿದರೂ ಕಡಿಮೆಯೇ. ಈ ಭೂಪಟದ ಜೊತೆಗೆ ನೀಡಲಾಗಿರುವ `ಏಕಾತ್ಮಕತೆಯ ಆಧಾರಗಳು' ಶೀಷರ್ಿಕೆಯ ಜೊತೆಗೆ ......ದ್ವಾದಶ ಜೋತಿಲರ್ಿಂಗಗಳು, 51 ಶಕ್ತಿ ಪೀಠಗಳು, ವೈದಿಕ ಮಂತ್ರಗಳು, ಸಪ್ತ ಮೋಕ್ಷದಾಯಕ ನಗರಗಳು......ಇತ್ಯಾದಿ ಇತ್ಯಾದಿಯಾಗಿ ದೊಡ್ಡ ಪಟ್ಟಿಯನ್ನೇ ಕೊಡಲಾಗಿದೆ. ಇದನ್ನು ನೋಡಿದರೆ ಇದೊಂದು ಪಠ್ಯಪುಸ್ತಕ ಎಂಬುದಕ್ಕಿಂತ ಯಾವುದೋ ಕರ್ಮಟ ಜ್ಯೋತಿಷಿಯ ಕಪಾಟಿನಿಂದ ಹೊರ ತೆಗೆದ ಮುಗ್ಗುಲು ಧಾಮರ್ಿಕ ಕಂತೆ ಪುರಾಣದಂತಿದೆ.
ರಾಮ, ಜನಕ ಮಹಾರಾಜರನ್ನು ಐತಿಹಾಸಿಕ ವ್ಯಕ್ತಿಗಳನ್ನಾಗಿ ಮಾಡುವ ಯತ್ನ
8ನೇ ತರಗತಿಯ ಪಠ್ಯ-ಪುಸ್ತಕದ ಅಧ್ಯಾಯ 3- 'ಭಾರತದ ಪ್ರಾಚೀನ ನಾಗರೀಕತೆಗಳು' ಎಂಬ ಪಾಠದಲ್ಲಿ (ಪುಟ15) ನಂತರದ ವೇದಗಳ ಕಾಲ ಎಂಬ ಶೀಷರ್ಿಕೆಯಡಿ ಇರುವ ಭಾಗದಲ್ಲಿ ಇರುವ ವಾಕ್ಯಗಳು ಹೀಗಿವೆ. ನಂತರದ ದಿನಗಳಲ್ಲಿ ಆರ್ಯರು ಗಂಗಾನದಿಯ ಪೂರ್ವ ಪ್ರದೇಶಗಳಾದ ಉತ್ತರದ ಕೋಸಲ ಹಾಗೂ ವಿದೇಹದಲ್ಲಿ ಬಂದು ನೆಲೆಸಿದರು. ಈ ಪ್ರದೇಶಗಳು ರಾಮ ಹಾಗೂ ಜನಕ ಮಹಾರಾಜರಿಂದ ಖ್ಯಾತಿಯನ್ನು ಪಡೆದವು. ಬುದ್ಧನ ಕಾಲಕ್ಕಾಗಲೇ ಜನಕನ ವಿದೇಹ ಹಾಗೂ ಅವನ ರಾಜಧಾನಿ ಮಿಥಿಲ ತನ್ನ ಹಿಂದಿನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತ್ತು...
ಬುದ್ಧನಂತಹ ಐತಿಹಾಸಿಕ ವ್ಯಕ್ತಿಯ ಜೊತೆ ಸೇರಿಸಿ ರಾಮನನ್ನೂ ಕೂಡ ಐತಿಹಾಸಿಕ ವ್ಯಕ್ತಿಯನ್ನಾಗಿಸುವ ತಂತ್ರಗಾರಿಕೆ ಇಲ್ಲಿ ಸ್ಪಷ್ಟವಾಗಿದೆ. ಬಾಬರೀ ಮಸೀದಿ- ರಾಮ ಮಂದಿರದ ವಿವಾದವನ್ನು ಬಡಿದೆಬ್ಬಿಸಿ ದೇಶದಲ್ಲಿಸಂಘ-ಪರಿವಾರ ನಡೆಸಿದ ರಕ್ತಪಾತದ ರಾಜಕಾರಣದ ಹಿನ್ನೆಲೆಯಲ್ಲಿಈ ಪ್ರಶ್ನೆಯ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಇಲ್ಲಿ ಕೊಡಲಾಗಿರುವ ಉದಾಹರಣೆಗಳು ಕೆಲವು ಮಾತ್ರ. ಸಾಮಾಜಿಕ ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಲ್ಲಿ ಹಲವು ಗಂಭೀರವಾದ ವಿಕೃತಿಗಳು ಪಠ್ಯ-ಪುಸ್ತಕಗಳಲ್ಲಿ ಸೇರಿಬಿಟ್ಟಿವೆ. ಮೂಲಭೂತವಾಗಿ ಇತಿಹಾಸ ಹಾಗೂ ಸಮಾಜವನ್ನು ನೋಡುವ ದೃಷ್ಟಿಕೋನವೇ ದೋಷಪೂರಿತವಾಗಿದೆ. ಸಂಘ ಪರಿವಾರದ ಮತಾಂಧ, ಜಾತಿವಾದಿ, ಹಗೂ ಸಮಾಜದ ಆಳುವ ವರ್ಗದ ಪರವಾದ ದೃಷ್ಟಿಕೋನದಿಂದ ವಿಚಾರಗಳನ್ನು ನಿರೂಪಿಸಿ ರುವುದರಿಂದ ಇಡೀ ಪಠ್ಯವನ್ನೇ ಪುನರ್ ರೂಪಿಸಬೇಕಾದ ಅಗತ್ಯವಿದೆ. 8ನೇ ತರಗತಿಯ ಪಠ್ಯದಲ್ಲಿ ಹಲವು ವಿಕೃತಿಗಳನ್ನು ಸರಿಪಡಿಸಲು ಪ್ರಯತ್ನಿಸಿರುವುದು ಕಂಡು ಬರುತ್ತದೆಯಾದರೂ ಗಂಭೀರವಾದ ಕೆಲವು ವಿಕೃತಿಗಳು ಹಾಗೇ ಉಳಿದುಕೊಂಡಿವೆ. 5ನೇ ತರಗತಿಯ ಪಠ್ಯದಲ್ಲಂತೂ ವಿಕೃತಿ, ವಿಷಪೂರಿತ ವಿಚಾರಗಳು ಪಠ್ಯದುದ್ದಕ್ಕೂ ಹಾಸು ಹೊಕ್ಕಾಗಿದೆ.
ಜಾತಿಯ ಕ್ರೌರ್ಯವನ್ನು ಮರೆಮಚುವ ಯತ್ನ.
ಜಾತೀಯತೆ ಎಂದರೆ ಜಾತಿಯ ಕುರಿತು ಅತೀವ ನಿಷ್ಠೆ ಎನ್ನಬಹುದು ಎನ್ನುತ್ತದೆ ಈ ಪಠ್ಯ. ಅಂದರೆ ಜಾತೀಯತೆ ಎಂದರೆ ಮೇಲು ಕೀಳು ಎಂಬ ಭಾವನೆಗಳ ಆಧಾರದಲ್ಲಿ ನಿದರ್ಿಷ್ಟ ಜನ ಸಮುದಾಯಗಳನ್ನು ತುಳಿಯುವ ' ಶೋಷಿಸುವ ಒಂದು ಅಸಮಾನ-ಅಮಾನವೀಯ ಸಾಮಾಜಿಕ ವ್ಯವಸ್ಥೆ ಎಂಬುದನ್ನು ಪಠ್ಯವು ಮರೆ ಮಾಚಲು ಪ್ರಯತ್ನಿಸುತ್ತದೆ. ಅದರಿಂದಾಗಿಯೇ `ಗುಪ್ತರ ಕಾಲ - ಒಂದು ಸುವರ್ಣ ಯುಗ' ಎನ್ನುತ್ತದೆ ಈ ಪಠ್ಯ. ವೇದ ಕಾಲದ ನಂತರ ಚಾತುರ್ವರ್ಣ ವ್ಯವಸ್ಥೆ ಬಲಗೊಂಡ ಅಂಶ ಮುಂದೆ ಮೌರ್ಯ ಮತ್ತು ಗುಪ್ತರ ಕಾಲ ಘಟ್ಟಗಳಲ್ಲಿ ಅಸ್ಪೃಶ್ಯತೆ ಜಾತಿ ದಮನಗಳು ಸಾಂಸ್ಥಿಕ ಸ್ವರೂಪವನ್ನು ಪಡೆದುಕೊಂಡವು. ಕರಾಳ ಜಾತಿವಾದಿ ಕಟ್ಟಳೆಗಳನ್ನು ಸಮಾಜದ ಮೇಲೆ ಹೇರಿದ ಮನುಸೃತಿಯು ಈ ಹಂತದಲ್ಲಿಯೇ ಕ್ರೋಢೀಕರಣಗೊಂಡಿತು ಎಂಬ ಐತಿಹಾಸಿಕ ಸತ್ಯವನ್ನು ಮರೆಮಾಚಿ ಗುಪ್ತರ ಕಾಲವನ್ನು ಸುವರ್ಣ ಯುಗ ಎಂದು ಹೇಳಲಾಗುತ್ತಿದೆ. ಇಂತಹ ಮನೋಭಾವದ ಕಾರಣಕ್ಕಾಗಿಯೇ ವಚನ ಚಳುವಳಿ ಎಂದರೆ ಏನೋ ಒಂದು ಎರಡು ವಾಕ್ಯದಲ್ಲಿ ಹೇಳಿ ಮುಗಿಸುವ ಒಂದು ಸಾಮಾನ್ಯ ಘಟನಾವಳಿ ಯಂತೆ. ವೈದಿಕ ಧರ್ಮ ಚಿಂತನೆ ಸಂಸ್ಕೃತಿಯನ್ನು ಉಗ್ರವಾಗಿ ಖಂಡಿಸಿ ಸರಸಗಟಾಗಿ ತಿರಸ್ಕರಿಸಿ ಹೊಸದೊಂದು ಸಮಾಜದ ಕನಸಿನೊಂದಿಗೆ ಬೃಹತ್ ಆಂದೋಲನವನ್ನೇ ಆರಂಭಿಸಿದ ವಚನ ಚಳುವಳಿಯ ಪ್ರಣಾಳಿಕೆಯೇ ಈ ಪಠ್ಯದಲ್ಲಿ ಮಾಯವಾಗಿದೆ. ವೈದಿಕ ಸಂಸ್ಕೃತಿಯನ್ನು ಕೊಂಡಾಡುವಾಗಿನ ಸಂಭ್ರಮ ವಚನ ಚಳುವಳಿಯನ್ನು ಕುರಿತು ಇಲ್ಲ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇನ್ನೂ ಬೇಕಾದಷ್ಟು ಹೇಳಬಹುದು.
ವಿದೇಶಿಯರ ಬಗೆಗೆ ಸಂಶಯ ಬಿತ್ತನೆ
ವಿದ್ಯಾರ್ಥಿಗಳನ್ನು ಸಂಘ ಸಾಹಿತ್ಯದೆಡೆಗೆ ಸೆಳೆಯುವ ಸಂಚು
8ನೇ ತರಗತಿಯ ಕರಡು ಪಠ್ಯದಲ್ಲಿನ ಆಧ್ಯಾಯ -2 ಪಾಠ` ಪೌರ ಮತ್ತು ಪೌರತ್ವ' ದಲ್ಲಿ ಇದ್ದ ಈ ಒಂದು ಅಂಶವನ್ನು ನೋಡಿ. ಪೌರತ್ವ ಮತ್ತು ಪೌರತ್ವ ಪಡೆಯುವ ವಿಧಾನ ಎಂಬ ಶೀರ್ಷಿಕೆ ಅಡಿಯಲ್ಲಿ ಒಂದೆಡೆ ` ಭಾರತದಲ್ಲಿ ಪೌರತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳು ದೇಶವು 1947 ರಲ್ಲಿ ವಿಭಜನೆಯಾದಾಗಿನಿಂದ ಹಾಗೂ ನೆರೆ ದೇಶಗಳಾದ ಬಾಂಗ್ಲಾ, ಶ್ರೀಲಂಕಾಗಳಿಂದ ನಿಯಮ ಬಾಹಿರವಾಗಿ ವಲಸೆ ಬರುವವರಿಂದ ಉದ್ಭವಗೊಂಡಿವೆ.' ಎನ್ನುತ್ತದೆ. ಈ ವಿವರಣೆಯ ನಂತರ ಪಾಠದ ಕೊನೆಯಲ್ಲಿ ವಿದ್ಯಾರ್ಥಿಗಳನ್ನು ಚಟುವಟಿಕೆಗಳಿಗೆ ಪ್ರೇರೇಪಿಸುವ ಭಾಗದಲ್ಲಿ ನೀಡಲಾಗಿರುವ ಸೂಚನೆ (ನಂ.2) ನೋಡಿ. `` ಪೋಲಿಸ್ ಠಾಣೆಯೊಂದಕ್ಕೆ ಭೇಟಿ ನೀಡಿ ಉನ್ನತ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿ ಭಾರತದಲ್ಲಿ ವಿದೇಶಿಯರು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಹಾಗೂ ಅವರನ್ನು ಶಿಕ್ಷಿಸುವಲ್ಲಿ ಪೋಲಿಸ್ ಇಲಾಖೆಗೆ ಇರುವ ಮಿತಿಗಳ ಬಗ್ಗೆ ಚರ್ಚಿಸಿ. (ಮಾಹಿತಿಯನ್ನು ದಿನ ಪತ್ರಿಕೆ, ನಿಯತಕಾಲಿಕೆಗಳ ಅಥವಾ ಅಂರ್ತಜಲದಿಂದ ಸಂಗ್ರಹಿಸಿಕೊಳ್ಳಿ)''
ಇದು ಸ್ವಷ್ಟವಾಗಿ ದೇಶ ವಿಭಜನೆಯ ಕಾಲದಲ್ಲಿ ಬಾಂಗ್ಲಾ ದೇಶದಿಂದ ಬದುಕು ಹುಡುಕಿಕೊಂಡು ಭಾರತಕ್ಕೆ ಬಂದಿರುವ ಬಡ ಮುಸ್ಲೀಮರನ್ನು ಗುರಿ ಮಾಡಲು ಪ್ರಚೋದನೆ. ನಿಜ ಭಾರತಕ್ಕೆ ಕಾನೂನು ಬಾಹಿರವಾಗಿ ಯಾರೇ ಆದರೂ ನುಸುಳುವುದನ್ನು ತಡೆಯಬೇಕು. ಆದರೆ ಆ ಹೆಸರಿನಲ್ಲಿ ಈ ಕುರಿತ ಸಂಘ ಪರಿವಾರದ ದ್ವೇಷಪೂರಿತ ಸಾಹಿತ್ಯದ ಕಡೆಗೆ ಅಂದರೆ ಸಂಘ ಪ್ರೇರಿತ ಪತ್ರಿಕೆಗಳು , ವೆಬ್ಸೈಟುಗಳ ಕಡೆಗೆ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನ ಇಲ್ಲಿದೆ. ಪಠ್ಯ ರಚನಾ ಸಮಿತಿಯೊಳಗೇ ಬಂದಿರುವ ಆಕ್ಷೇಪಣೆಯಿಂದಾಗಿ ಈ ಅಂಶವನ್ನು ಅಂತಿಮ ಕರಡಿನಲ್ಲಿ ತೆಗೆಯಲಾಗಿದೆ. ವಿದೇಶಿಯರ ಬಗೆಗೆ ಸಂಶಯವನ್ನು ಬಿತ್ತುವ, ಪೋಲಿಸ್ ಇಲಾಖೆಯನ್ನೂ ಕೋಮುವಾದೀಕರಿಸಲು ಪ್ರೇರೇಪಿಸುವ ಸಂಘ ಪರಿವಾರದ ಆಲೋಚನೆಯನ್ನು ಈ ಮೂಲಕ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಹೀಗೆ 5 ನೇ ತರಗತಿಯ ಹರ್ಷವರ್ಧನನ ಕುರಿತ ಪಾಠದ ಕೊನೆಯಲ್ಲಿ `ಚಟುವಟಿಕೆಗಳು'ಎಂಬ ಶೀರ್ಷಿಕೆಯಲ್ಲಿ ``ಹರ್ಷವರ್ಧನ ಮತ್ತು ಇಮ್ಮಡಿ ಪುಲಿಕೇಶಿಯ ಜೀವನ ಚರಿತ್ರೆಯನ್ನು ಓದಿ. (ಆಕರ:ಭಾರತ_ಭಾರತಿ ಪುಸ್ತಕ ಸಂಪದ) ಎಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಇದು ರಾಷ್ಟ್ರೋತ್ಥಾನದ ಪ್ರಕಟಣೆ. ಹೇಗಿದೆ ವಿದ್ಯಾರ್ಥಿಗಳನ್ನು ಆರೆಸ್ಸೆಸ್ನ ಮತಾಂಧ ಸಾಹಿತ್ಯದೆಡೆಗೆ ತಳ್ಳುವ ಸಂಚು.
-ಆರ್.ರಾಮಕೃಷ್ಣ
Subscribe to:
Posts (Atom)