Sunday 19 February 2012

ಪಠ್ಯ ಬದಲಾವಣೆ : ಮುಗ್ಧ ಮನಸುಗಳಿಗೆ ವಿಷ ತುಂಬುವ ಯತ್ನ


ಕರ್ನಾಟಕ ರಾಜ್ಯದ ಪ್ರಗ್ನಾವಂತ ಜನತೆ ನಿರೀಕ್ಷಿಸುತ್ತಿದ್ದಂತೆ ರಾಜ್ಯ ಬಿಜೆಪಿ ಸರ್ಕಾರವು ಶಾಲಾ ಪಠ್ಯ ಪುಸ್ತಕಗಳನ್ನು ಆರೆಸೆಸ್ಸಿನ ಮತಾಂಧ, ಜಾತಿವಾದಿ, ಪ್ರಗತಿ ವಿರೋಧಿ, ಕಂದಾಚಾರಿ ವಿಚಾರಗಳನ್ನು ತುರುಕುವ ಮೂಲಕ ಪಠ್ಯ ಪುಸ್ತಗಳನ್ನು ವಿಕೃತಗೊಳಿಸಿರುವ  ಪ್ರಕರಣ ಬಯಲಾಗಿದೆ.  ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಜಾರಿಗೆ ತರುವ ಉದ್ದೇಶದೊಂದಿಗೆ  5ನೇ ತರಗತಿಯ ಮತ್ತು 8ನೇ ತರಗತಿಯ ಪಠ್ಯ ಪುಸ್ತಕಗಳ ಕರಡನ್ನು  ಅಂತಿಮಗೊಳಿಸಲಾಗಿದೆ. ರಾಜ್ಯ ಸಚಿವ ಸಂಪುಟವು ಅದಕ್ಕೆ ಅನುಮೊದನೆಯನ್ನೂ ನೀಡಿದೆ.  ಅಂದರೆ ರಾಜ್ಯದ ಜನತೆ ತೀವ್ರವಾಗಿ ವಿರೋಧಿಸದಿದ್ದರೆ ಈ ವಿಷಮಯ ಪಠ್ಯಗಳು ಜಾರಿಗೆ ಬಂದು ನಮ್ಮ ಮಕ್ಕಳ ಮನಸ್ಸುಗಳು ವಿಷಪೂರಿತ ಗೊಳ್ಳುವ ಅಪಾಯ ಕಾದಿದೆ.  
ಈ ಪಠ್ಯಗಳನ್ನು ನೋಡಿದರೆ ಸಂಘ ಪರಿವಾರ ಇಂತಹ ಪಠ್ಯಗಳಲ್ಲಿ ಏನೆಲ್ಲಾ ತುಂಬಲು ತಹತಹಿಸುತ್ತದೆಯೋ ಅದೆಲ್ಲವನ್ನೂ ತುಂಬಲು ಸಾಧ್ಯವಾಗಿಲ್ಲದೇ ಇರಬಹುದು ಅನಿಸುತ್ತದೆ. ಬಹುಶ: ಅದಕ್ಕೆ ಪಠ್ಯಪುಸ್ತಕ ಸಮಿತಿಯೊಳಗಿನ ವಿರೋಧವೂ ಕಾರಣ ವಾಗಿರಬಹುದು.  ಆದರೆ ಅದರ ಅರ್ಥ ಈ ಪಠ್ಯದೊಳಗೆ ಸುರಿಯಲಾಗಿರುವ ವಿಷ ಕಡಿಮೆ ಅಪಾಯಕಾರಿ ಅಂತ ಖಂಡಿತ ಅಲ್ಲ.  
ಮುಸ್ಲಿಂ ದ್ವೇಷ
ಒಂದು ಅರ್ಥದಲ್ಲಿ ಸಂಘ ಪರಿವಾರದ ಚಾಲಕ ಶಕ್ತಿ, ಸಂಘ ಪರಿವಾರದ ಉಸಿರು ಮುಸ್ಲಿಂ ದ್ವೇಷ. ಮತ್ತು ಅಲ್ಪಸಂಖ್ಯಾತರ ದ್ವೇಷ.  ಮುಗ್ದ ಮಕ್ಕಳ ಮನಸ್ಸಿನಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಬಗೆಗೆ ಸಂಶಯ ಮೂಡಿಸುವ, ದ್ವೇಷವನ್ನು ಪ್ರೇರೆಪಿಸುವುದಕ್ಕೆ ಪೂರಕವಾಗಬಹುದಾದ ಹಲವು ಪೂರ್ವಗ್ರಹ ಪೀಡಿತವಾದ ವಿಚಾರಗಳನ್ನು ತುರುಕಲಾಗಿದೆ. ವಿಷಯಗಳ ನಿರೂಪಣೆಯಲ್ಲಿ ಪಕ್ಷಪಾತವನ್ನು ತೋರಲಾಗಿದೆ.  
5ನೇ ತರಗತಿಯ ಸಮಾಜ ವಿಗ್ನಾನ ಪಠ್ಯದ ಈ ಉದಾಹರಣೆಗಳನ್ನು ನೋಡಿ.  
ಈ ಪಠ್ಯದ ಮೊದಲ ಪಾಠವು ರಾಜ್ಯದ ಎಲ್ಲ ಕಡೆಗೂ ಒಂದೇ ಇರುವುದಿಲ್ಲ. ಆಡಳಿತಾತ್ಮಕ ವಿಭಾಗವಾದ ಬೆಂಗಳೂರು ವಿಭಾಗ, ಮೈಸೂರು ವಿಭಾಗ, ಬೆಳಗಾಂ ವಿಭಾಗ, ಗುಬ್ಲರ್ಗಾ ವಿಭಾಗಗಳಿವೆ. ಪ್ರತಿ ವಿಭಾಗದ ವಿದ್ಯಾರ್ಥಿಗಳು ತಮ್ಮ ಸುತ್ತ ಮುತ್ತಲ, ಸ್ಥಳೀಯ ಸಾಮಾಜಿಕ, ಆರ್ಥಿಕ, ಐತಿಹಾಸಿಕ, ಸಾಂಸ್ಕೃತಿಕ ಇತಿಹಾಸ, ವರ್ತಮಾನ, ಸ್ಥಿತಿಗತಿಗಳನ್ನು ಪರಿಚಯಿಸಿಕೊಡುವ ಉದ್ದೇಶವಿದೆ. ಇದರಿಂದಾಗಿ ಮೊದಲ ಪಾಠದಲ್ಲಿ ವಿಭಾಗದಿದಂದ ವಿಭಾಗಕ್ಕೆ ಬಿನ್ನತೆ ಇದೆ. ನಂತರದ ಪಾಠಗಳು ಇಲ್ಲರಿಗೂ ಒಂದೇ.
ಮೈಸೂರು ವಿಭಾಗದಲ್ಲಿನ ಮೊದಲ ಪಾಠದಲ್ಲಿ ಮೈಸೂರು ಒಡೆಯರನ್ನು ಹೊಗಳುವಾಗಿನ ಉತ್ಸಾಹ ಟಿಪ್ಪು, ಹೈದರಾಲಿಗಳ ವಿಚಾರ ಬಂದಾಗ ಉಡುಗಿ ಹೋಗುತ್ತದೆ. !
ಒಡೆಯರ ವಿಚಾರವಾಗಿ ಪ್ರಾರಂಭದ ಒಡೆಯರ ರಾಜರಲ್ಲಿ ಚಿಕ್ಕದೇವರಾಜನು ಅತ್ಯಂತ ಖ್ಯಾತಿ ಪಡೆದವನು. 'ಕರ್ನಾಟಕ ಚಕ್ರವತಿ' ಎಂಬ ಬಿರುದನ್ನು ಧರಿಸಿದ ಈತನು ರಾಜ್ಯವನ್ನು ವಿಸ್ತರಣೆ ಮಾಡಿದನು. ಈತನ ಆಳ್ವಿಕೆಯ ಕಾಲದಲ್ಲಿ ಮೈಸೂರು ಸಂಪದ್ಭರಿತವಾಯಿತು.'' 
``ಮೈಸೂರು ರಾಜ್ಯವನ್ನಾಳಿದ ಆ ಮೇಲಿನ ರಾಜರಲ್ಲಿ ಗಣನೀಯರಾದವರೆಂದರೆ ಮುಮ್ಮಡಿ ಕೃಷ್ಣರಾಜ ಒಡೆಯರು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರು. ಇವರಿಬ್ಬರೂ ಸಾಹಿತ್ಯ ಮತ್ತು ಕಲೆಗಳಿಗೆ ಅಪಾರ ಪ್ರೋತ್ಸಾಹ ನೀಡಿದರು.'' ಎನ್ನುವ ಪಠ್ಯವು ಕನರ್ಾಟಕ ಅಭಿವೃದ್ದಿಗೆ ಹಲವು ಅಮೋಘ ಕೊಡುಗೆಗಳನ್ನು ನೀಡಿದ, ಆಧುನಿಕ ಮೈಸೂರಿನ ಅಭಿವೃದ್ದಿಗೆ ಅಡಿಪಾಯವನ್ನು ಹಾಕಿದ ಹೈದರಾಲಿ, ಟಿಪ್ಪುವಿನ ಯಾವ ಕೊಡುಗೆಗಳನ್ನೂ ಪ್ರಸ್ತಾಪಿಸುವುದಿಲ್ಲ.  ಸಾಮ್ರಾಜ್ಯಶಾಹಿ ಬ್ರಿಟೀಷರನ್ನು ದೇಶದಿಂದ ಓಡಿಸಲು ತನ್ನ ಮಕ್ಕಳನ್ನು ಒತ್ತೆ ಇಟ್ಟು ಕೊನೆಗೆ ತನ್ನ ಪ್ರಾಣವನ್ನೇ ಪಣವಾಗಿರಿಸಿ ಇಟ್ಟು ಹೋರಾಟ ನಡೆಸಿದ ಟಿಪ್ಪುವಿನ ಶೌರ್ಯ, ಧೀಮಂತಿಕೆ ದೇಶಪ್ರೇಮ ಬಗೆಗೂ ಹೇಳದೇ ``ಚಿಕ್ಕದೇವರಾಯನ ಮರಣಾನಂತರ ಆರು ದಶಕಗಳ ಕಾಲ ದುರ್ಬಲ ರಾಜರುಗಳೇ ಅಧಿಕಾರದಲ್ಲಿದ್ದರು. ಈ ಅವಧಿಯಲ್ಲಿ ದಳವಾಯಿಗಳೆಂದು ಕರೆಯಲಾಗುವ ಸೇನಾಪತಿಗಳು ರಾಜರ ಪರವಾಗಿ ಆಳ್ವಿಕೆ ನಡೆಸುತ್ತಿದ್ದರು. ಮುಂದೆ 1761ರಲ್ಲಿ ರಾಜಧಾನಿಯಲ್ಲಿ ಸೈನಿಕ ಬಂಡಾಯ ಕಾಣಿಸಿಕೊಂಡಾಗ, ಹೈದರಾಲಿಯು ದಳವಾಯಿ ನಂಜರಾಜನನ್ನು ನಿವೃತ್ತಿಗೊಳಿಸಿ ತಾನೇ ಅಧಿಕಾರವಹಿಸಿಕೊಂಡನು. 1763ರಿಂದ 1799ರವರೆಗೆ ಮೈಸೂರು ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಮಧ್ಯಂತರ ಆಳ್ವಿಕೆಯಲ್ಲಿತ್ತು. ಇದೇ ವೇಳೆ ಭಾರತದಲ್ಲಿ ಇಂಗ್ಲಿಷರು ರಾಜಕೀಯ ಶಕ್ತಿಯಾಗಿ ತಲೆಯೆತ್ತಿದ್ದರು. 1799ರಲ್ಲಿ ಅವರು ಟಿಪ್ಪುಸುಲ್ತಾನನ್ನು ಸೋಲಿಸಿ ಮೈಸೂರು ರಾಜ್ಯವನ್ನು ತಮ್ಮ ಅಧಿಕಾರದಡಿಯಲ್ಲಿ ತಂದರು.'' ಎಂದು ಹೇಳಿ ಕೈ ತೊಳೆದುಕೊಳ್ಳುತ್ತದೆ. ಮೈಸೂರು ವಿಭಾಗದಲ್ಲೆ ಹೈದರಾಲಿ, ಟಿಪ್ಪುಗಳಿಗೆ ಈ ಗತಿಯಾದರೆ ಇನ್ನು ಬೇರೆ ವಿಭಾಗ ಪಠ್ಯದಲ್ಲಿ ಕೇಳುವುದೇನು ? ಚೆಲುವ ಕನ್ನಡ ನಾಡು ಎಂಬ ಎಲ್ಲರಿಗೂ ಸಾಮಾನ್ಯವಾದ ಭಾಗದಲ್ಲಿ  ಟಿಪ್ಪುವಿಗೆ  `ಮೈಸೂರು ಹುಲಿ' ಎಂಬ ಬಿರುದು ತೊಡಿಸಿರುವಷ್ಟಕ್ಕೆ ನಾವು ತೃಪ್ತಿ ಪಡಬೇಕಾಗಿದೆ.   
ಗುಲಬರ್ಗಾ ವಿಭಾಗದ ಪಠ್ಯದ ಮೊದಲ ಪಾಠದಲ್ಲಿ `ಹೈದರಾಬಾದ್ ವಿಮೋಚನಾ ಸಂಗ್ರಾಮ' ಎಂಬ ಒಂದು  ಶೀರ್ಷಿಕೆಯಲ್ಲಿ ಹೈದರಾಬಾದ್ ನಿಜಾಮನ ವಿರುದ್ದದ ಹೋರಾಟದ ಧೀರ್ಘ ವಿವರಣೆ ಇದೆ. 
ನಿಜಾಮನ ಆಡಳಿತ ಕ್ರೂರವಾಗಿತ್ತು ಎಂಬುದು ನಿಜವೇ. ನಿಜಾಮನ ಆಡಳಿತ ಎಂದರೆ ಒಬ್ಬ ಪಾಳೇಯಗಾರಿ ಸುಲಿಗೆಕೋರನ ಆಡಳಿತ.  ಮತಾಂಧರೂ ಆಗಿದ್ದ ನಿಜಾಮನ ಬಂಟರ, ಸೈನ್ಯದ ದೌಜನ್ಯಗಳನ್ನು ವಿವರಿಸುವಾಗ ಅಲ್ಲಿ ತೋರಬೇಕಾದ ಎಚ್ಚರವನ್ನು ಸಮ ಚಿತ್ತದ ವಿವೇಕವನ್ನು ತೋರದೇ ಅದು ಮುಸ್ಲಿಂ ಆಡಳಿತಗಾರರು ಹಾಗೂ ಹಿಂದೂ ಪ್ರಜೆಗಳ ನಡುವಿನ ಹೋರಾಟ ಎಂಬಂತೆ ಚಿತ್ರಿಸಲಾಗಿದೆ. 
ದೇಶಕ್ಕೆ ಸ್ವಾತಂತ್ಯ್ರ ಸಿಗುವ ಕಾಲಘಟ್ಟದ ಬೆಳವಣಿಗೆಗೆಗಳ ಕುರಿತು
``ನಿಜಾಮ ಭಾರತ ಒಕ್ಕೂಟದಿಂದ ಹೊರಗುಳಿದು ಸ್ವತಂತ್ರ ಆಳ್ವಿಕೆ ನಡೆಸಲು ನಿರ್ಧರಿಸಿದನು.'' ಎನ್ನುವ ಪಠ್ಯವುಮೈಸೂರು ಒಡೆಯರ ಕುರಿತ ಪಾಠದಲ್ಲಿ ಮಾತ್ರ.
``1947 ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾದಾಗ ಮೈಸೂರು ರಾಜ್ಯವು ಭಾರತ ಗಣರಾಜ್ಯದಲ್ಲಿ ಸೇರ್ಪಡೆಗೊಂಡಿತು'' ಎಂದು ಕೈ ತೊಳೆದುಕೊಳ್ಳುತ್ತದೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಕೂಡಲೇ ಮೈಸೂರು ಮಹಾರಾಜರೇನು ಓಡೋಡಿ ಹೋಗಿ ಭಾರತ ಒಕ್ಕೂಟವನ್ನು ಸೇರಲಿಲ್ಲ. ಅವರೂ ಕೂಡ ಪ್ರತ್ಯೇಕ 'ಮೈಸೂರು ರಾಷ್ಟ್ರ'ವಾಗಿ ಉಳಿದುಕೊಳ್ಳುವ ಯತ್ನ ಮಾಡಿದ್ದರು. ಜನತೆಯ ಅಭಿಮತ ಅದಕ್ಕೆ ಪರವಾಗಿರಲಿಲ್ಲ. ಜನತೆಯು ಆ ಧೋರಣೆಯನ್ನು ಖಂಡಿಸಿ ಹೋರಾಟ ನಡೆಸಿದರು. ಅದರಿಂದಾಗಿ ಮೈಸೂರು ಮಹಾರಾಜರು ಭಾರತ ಒಕ್ಕೂಟಕ್ಕೆ ಸೇರಲು ಒಪ್ಪಲೇ ಬೇಕಾಯಿತು. ಇದು ಜಗಜಾಹೀರಾಗಿರುವ ಇತಿಹಾಸ. ಇಂಥಾ ಇತಿಹಾಸವನ್ನು ತಿರುಚುವ ಸಂಘ ಪರಿವಾರದ ಭಂಡತನವನ್ನು ಮೆಚ್ಚಲೇ ಬೇಕು.
ಒಡೆಯರು ಹಿಂದೂಗಳು ಹಾಗಾಗಿ ಅವರು ದೇಶದ ಪರ, ನಿಜಾಮ ಮುಸ್ಲಿಂ ಹಾಗಾಗಿ ಆತ ದೇಶ ವಿರೋಧಿ ಎಂದು ಬಿಂಬಿಸುವುದಲ್ಲವೇ ಈ ಬಗೆಯ ನಿರೂಪಣೆಯ ಉದ್ದೇಶ !?.
ಮೈಸೂರಿನಲ್ಲಿ ರಾಜರ ಆಡಳಿತ ಹೋಗಿ ಜವಾಬ್ದಾರಿ ಸರ್ಕಾರ ಅಂದರೆ ಚುನಾಯಿತ ಸರ್ಕಾರ ಬರಬೇಕೆಂಬುದಕ್ಕಾಗಿಯೂ ಈ ಮೈಸೂರು ಜನತೆ ದೊಡ್ಡ ಹೋರಾಟ ಮಾಡಬೇಕಾಗಿ ಬಂದಿತ್ತು ಎಂಬ ಕೇವಲ 65 ವರ್ಷಗಳ ಹಿಂದಿನ ಇತಿಹಾಸ ಜನರ ಮನಸ್ಸಿನಿಂದ ಅಳಿಸಿ ಹೋಗಲು ಸಾಧ್ಯವೇ?

ದತ್ತಾತ್ರೇಯ ಪೀಠ ಮಾತ್ರ.... ಬಾಬಾ ಬುಡನ್ ಇಲ್ಲ....
``ಬಾಬಾಬುಡನ್ ಗಿರಿ: ಇದು ಪಶ್ಚಿಮ ಘಟ್ಟದ ಒಂದು ಭಾಗ. ಇದನ್ನು ಚಂದ್ರದ್ರೋಣ ಪರ್ವತ ಎಂದು ಕರೆಯುತ್ತಾರೆ. ಇಲ್ಲಿ ಅನೇಕ ಗಿಡ ಮೂಲಿಕೆಗಳು ದೊರೆಯುತ್ತವೆ.  ಇದರ ನೆತ್ತಿಯಲ್ಲಿರುವ ಗುಹೆಯಲ್ಲಿ ದತ್ತಾತ್ರೇಯ ಪೀಠವಿದೆ. ಇಲ್ಲಿಗೆ ಸಹಸ್ರಾರು ಭಕ್ತರು ಬರುತ್ತಾರೆ.''  ಇದು ಈ ಪಠ್ಯವು ನಮ್ಮ ನಾಡಿನ ಹೆಮ್ಮೆಯ ಕೋಮು ಸೌಹಾರ್ದ ಪರಂಪರೆಯ ತಾಣದ ಬಗೆಗೆ ಹೇಳುತ್ತಿರುವ ಮಾತು. `ಸರ್ವ ಜನಾಂಗದ ಶಾಂತಿಯ ತೋಟ' ಎಂಬ ಕವಿವಾಣಿಯನ್ನು ನೆನಪಿಸುವಂತಹ_ ನೂರಾರು ವರ್ಷಗಳಿಂದಲೂ ಜಾತಿ ಭೇದವಿಲ್ಲದೇ ಹಿಂದೂ-ಮುಸ್ಲಿಂ ಎಲ್ಲಾ ಜನರು ಭಕ್ತಿ, ಶ್ರಧ್ದೆಯಿಂದ ನಡೆದುಕೊಳ್ಳುತ್ತಿರುವ ಒಂದು ಶ್ರದ್ದಾಕೇಂದ್ರವನ್ನು ಹಿಂದುತ್ವವಾದಿ, ವೈದಿಕ ಪುರೋಹಿತಶಾಹಿ ಕೇಂದ್ರವನ್ನಾಗಿಸುವ ಸಂಚಿಗೆ ಪೂರಕವಾಗಿ ನಿರೂಪಿಸಿರುವ ಪಠ್ಯವಿದು. ಬಾಬಾಬುಡನ್ ಗಿರಿ ಪ್ರಶ್ನೆಯನ್ನು `ಕನರ್ಾಟಕದ ಅಯೋಧ್ಯೆ'ಯನ್ನಾಗಿ ಸಂಘ ಪರಿವಾರ  ಬಳಸುತ್ತಿದೆ ಎಂಬುದನ್ನು ದೇಶದ ಜನರು ಗಮನಿಸುತ್ತಿದೆ. ಈ ವಿವಾದವನ್ನು ಬಳಿಸಿ ಕರ್ನಾಟಕವನ್ನು `ಗುಜರಾತ್ ಮಾಡುತ್ತೇವೆ' ಎಂದೆಲ್ಲಾ ಆರೆಸ್ಸೆಸ್-ಬಿಜೆಪಿ ಮುಖಂಡರು ಚೀರಿದ್ದು ಜನರ ಮನಸ್ಸಿನಲ್ಲಿ ಇನ್ನೂ ಹಸಿಯಾಗಿದೆ. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕೋಮುವಾದಿಗಳ ಈ ಮತಾಂಧ ರಾಜಕೀಯದ ವಿಕೃತ ರೂಪವಾಗಿ ಈ ವಿಷಯ ಪಠ್ಯದಲ್ಲಿ ಹೀಗೆ ನಿರೂಪಿತವಾಗಿದೆ ಎನ್ನುವುದು ಜನ ಸಮುದಾಯಗಳ ನಡುವೆ ಐಕ್ಯತೆ, ಶಾಂತಿ ಸೌಹಾರ್ದತೆಯನ್ನು ಬಯಸುವ ಎಲ್ಲರ ಕಣ್ಣು ತೆರೆಸ ಬೇಕಿದೆ. 
ಇದೇ ಮೈಸೂರು ಭಾಗವನ್ನು ಪರಿಚಯಿಸುವ ಪಠ್ಯದ `ಮರೆಯಲಾಗದ ಮಹಾನುಭಾವರು' ಎಂಬ ಭಾಗದಲ್ಲಿ  "ತಗಡೂರು ರಾಮಚಂದ್ರ ರಾವ್ ಅವರು ಅಸ್ಪೃಶ್ಯತೆಯ ವಿರುದ್ದ ಹೋರಾಡಿದರಲ್ಲದೆ ಕ್ರೈಸ್ತರಾಗಿ ಮತಾಂತರಗೊಂಡ ಬಡವರನ್ನು ಮತ್ತೆ ತಮ್ಮ ಮತಗಳಿಗೆ ಸೇರುವಂತೆ ಮಾಡಿದರು.'' ಎನ್ನುತ್ತದೆ. ಅಂದರೆ ಬಡವರನ್ನು ಆಮಿಷ ಒಡ್ಡಿ ಮತಾಂತರ ಮಾಡಲಾಗಿತ್ತು. ಅವರನ್ನು ಮರಳಿ ಕರೆ ತರಲಾಯಿತು ಎಂಬ ಅರ್ಥವನ್ನು ತರುವುದೇ ಈ ಮಾತುಗಳ ಮೂಲಕ ವ್ಯಕ್ತಗೊಳಿಸುವ ಅರ್ಥ.     
ಮೂಢ ನಂಬಿಕೆ ಅಗ್ನಾನಗಳ ಬಿತ್ತನೆ
ಗಂಗಾವತಿ ತಾಲ್ಲೂಕನ್ನು ಪರಿಚಯಿಸುವ  ಭಾಗದಲ್ಲಿ ``ಗಂಗಾವತಿ ತಾಲ್ಲೂಕಿನ ಅಂಜನಾದ್ರಿ (ಕಿಷ್ಕಿಂದೆ) ಪೌರಾಣಿಕವಾಗಿ ಪ್ರಸಿದ್ದವಾಗಿದೆ.  ವೀರಾಗ್ರೇಸರ, ರಾಮ ಭಕ್ತ, ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾದ ಹನುಮಂತನು ಹುಟ್ಟಿದ್ದು, ರಾಮಾಯಣದ ಸುಂದರಕಾಂಡ ನಡೆದದ್ದು ಇಲ್ಲಿಯೇ.'' ಎನ್ನುತ್ತದೆ ಪಠ್ಯ. ಆಹಾ!! ಏನು ವೈಚಾರಿಕತೆ. ಏನು ವೈಗ್ನಾನಿಕ ನಿರೂಪಣೆ!? ಮುಗ್ದ ಜನತೆ ಹಾಗೆ ನಂಬಿರಬಹುದು. ಆದರೆ ಪಠ್ಯ ಪುಸ್ತಕವೊಂದು  `ಜನರಲ್ಲಿ ಇಂತಹ ನಂಬಿಕೆ ಇದೆ' ಎಂದೋ ಅಥವಾ 'ಇಂತಹ ಪ್ರತೀತಿ ಇದೆ'  ಅಂತಲೋ ಹೇಳುವುದು ಬಿಟ್ಟು, ಪುರಾಣದ ಕುರಿತಾದ ಜನರ ಆಧಾರವಿಲ್ಲದ ನಂಬಿಕೆಗಳನ್ನು  ಐತಿಹಾಸಿಕ ಸತ್ಯ ಎಂದು ನಿರೂಪಿಸಲು ಹೊರಟಿದೆ.
ಇಂತಹ ನಿರೂಪಣೆಗೆ ಇದೊಂದೇ ಉದಾಹರಣೆಯಲ್ಲ. ಇಂತಹ ಇನ್ನೂ ಹಲವಾರು ಉದಾಹರಣೆಗಳು ಪಠ್ಯದಲ್ಲಿವೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಪರಿಚಯಿಸುವ  ಭಾಗದಲ್ಲಿ ಕಂಡು ಬರುವ ಈ ಬರಹವನ್ನು ನೋಡಿ.
* "ಕದ್ರಿ ಮಂಜುನಾಥ ದೇವಸ್ಥಾನ: 
ಶಿವನು ಪರಶು ರಾಮನಿಗೆ ಮಂಜುನಾಥ ನಾಗಿ ಒಲಿದು, ಕದಲೀವನ ಮಧ್ಯದಲ್ಲಿ ಜ್ಯೋತಿಲರ್ಿಂಗ ಸ್ವರೂಪವಾಗಿ ಅವತರಿಸಿದ ಪುಣ್ಯ ಕ್ಷೇತ್ರವೇ ಕದ್ರಿ.'' ಎನ್ನುತ್ತದೆ ಪಠ್ಯ. 
ಅಖಂಡ `ಹಿಂದೂ ರಾಷ್ಟ್ರ'ದ ಕಣ್ಣೋಟವೂ  ಯುದ್ದೋನ್ಮಾದ ಬಿತ್ತುವ ದುಷ್ಟ ಅಜೆಂಡಾವೂ `ಸಾಂಸ್ಕೃತಿಕ ಭಾರತ' ಎಂಬ ತಲೆ ಬರಹದ ಅಡಿಯಲ್ಲಿ 5 ಮತ್ತು 8 ನೇ ತರಗತಿಗಳ ಎರಡೂ ಪಠ್ಯಪುಸ್ತಕಗಳಲ್ಲಿ ಒಂದು ಭೂಪಟವನ್ನು ನೀಡಲಾಗಿದೆ. ಈ ಭೂಪಟವು ಭಾರತದ ನೆರೆ ಹೊರೆಯ ದೇಶಗಳಾದ ಆಫಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಬಮರ್ಾ, ಶ್ರೀಲಂಕ ಅಲ್ಲದೇ ಟಿಬೆಟ್ ಮುಂತಾದ ಎಲ್ಲವನ್ನೂ ಭಾರತದ ಭಾಗವಾಗಿ ತೋರಿಸುತ್ತಿದೆ. ಎಳೆಯ ವಯಸ್ಸಿನ ಮಕ್ಕಳ ಮನಸ್ಸಿನಲ್ಲಿ ಇಂತಹ ಭಾವನೆಗಳನ್ನು ಬಿತ್ತಿದರೆ ಮುಂದೆ ಬೆಳೆದು ದೊಡ್ಡವರಾದಾಗ ಅಂತಹ ಮಕ್ಕಳ ಮನೋಭಾವ ಏನಾಗಿರುತ್ತದೆ ಎಂದು ತುಂಬಾ ಎಚ್ಚರದಿಂದ ಯೋಚಿಸಬೇಕಿದೆ.
ಆರೆಸ್ಸೆಸ್ನ ಭೌದ್ದಿಕ ತರಬೇತಿ ಶಿಬಿರ, ಸಂಘಟನಾ ತರಬೇತಿ ಶಿಬಿರಗಳಲ್ಲಿ ಶಿಬಿರಾಥರ್ಿಗಳಿಗೆ ಯುದ್ಧದ ಆಟಗಳನ್ನು ಆಡಿಸ ಲಾಗುತ್ತದೆ. ಯುವಕರನ್ನು (ಯುವತಿಯರು ಇರುವುದಿಲ್ಲ... ಅವರಿಗೇನಿದ್ದರೂ ಈ `ವೀರ ಕೇಸರಿ'ಗಳಿಗೆ ಆರತಿ ಬೆಳಗುವ ಕೆಲಸ ಅಷ್ಟೆ.)ಎರಡು ಗುಂಪುಗಳಾಗಿಸಿ ಅದಕ್ಕೆ ಬೇರೆ ಬೇರೆ  ದೇಶಗಳ ತಂಡಗಳು ತಾವು ಎಂಬಂತಹ ಭಾವನೆಗಳನ್ನು ಬಿತ್ತಿ, `ಶತ್ರು' ಸಂಹಾರದ (ಬೆನ್ನನ್ನು ನೆಲಕ್ಕೆ ತಾಗಿಸುವ) ಸವಾಲು ಒಡ್ಡಲಾಗುತ್ತದೆ.  ಆಟದ ನಡುವೆ ಉದ್ರೇಕಕಾರಿ ಘೋಷಣೆಗಳು, ಯುದ್ದೋನ್ಮಾದವನ್ನು ಬಡಿದೆಬ್ಬಿಸುವ ಕೂಗಾಟ, ಕಿರುಚಾಟಗಳು ಇರುತ್ತವೆ. ಅಂತರಾಷ್ಟ್ರೀಯ ಕ್ರೀಡೆಗಳು ಅಥವಾ ವಿವಾದಗಳು ಎದ್ದು ಬಂದಾಗ ನಮ್ಮ ಯುವಕರು ತಾಳ್ಮೆಯಿಂದ, ಸಾವಧಾನತೆಯಿಂದ ವತರ್ಿಸಬೇಕಾದ ಎಷ್ಟೋ ಸಂದರ್ಭಗಳಲ್ಲಿ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡು ಕ್ರೂರ ಮೃಗಗಳಂತೆ ಆಡುವ ಸಂದರ್ಭವನ್ನು ನೋಡುತ್ತೇವೆ.  ಈ ಪ್ರವೃತ್ತಿಯ ಹಿಂದೆ ಸಂಘ ಪರಿವಾರದ ಇಂತಹ `ಆಟ'ಗಳ ಪ್ರಭಾವ ವ್ಯಾಪಕವಾಗಿರುತ್ತದೆ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಇನ್ನು ಪಠ್ಯ ಪುಸ್ತಕದಲ್ಲಿಯೇ ಇಂತಹ `ಸ್ಪೋಟಕ' ವಿಚಾರಗಳನ್ನು ತುಂಬುವುದರ `ಆಟ'ಗಳ ಅಪಾಯದ ಬಗೆಗೆ ಎಷ್ಟು ಹೇಳಿದರೂ ಕಡಿಮೆಯೇ. ಈ ಭೂಪಟದ ಜೊತೆಗೆ ನೀಡಲಾಗಿರುವ `ಏಕಾತ್ಮಕತೆಯ ಆಧಾರಗಳು' ಶೀಷರ್ಿಕೆಯ ಜೊತೆಗೆ ......ದ್ವಾದಶ ಜೋತಿಲರ್ಿಂಗಗಳು, 51 ಶಕ್ತಿ ಪೀಠಗಳು, ವೈದಿಕ ಮಂತ್ರಗಳು, ಸಪ್ತ ಮೋಕ್ಷದಾಯಕ ನಗರಗಳು......ಇತ್ಯಾದಿ ಇತ್ಯಾದಿಯಾಗಿ ದೊಡ್ಡ ಪಟ್ಟಿಯನ್ನೇ ಕೊಡಲಾಗಿದೆ. ಇದನ್ನು ನೋಡಿದರೆ ಇದೊಂದು ಪಠ್ಯಪುಸ್ತಕ ಎಂಬುದಕ್ಕಿಂತ ಯಾವುದೋ ಕರ್ಮಟ ಜ್ಯೋತಿಷಿಯ ಕಪಾಟಿನಿಂದ ಹೊರ ತೆಗೆದ ಮುಗ್ಗುಲು ಧಾಮರ್ಿಕ ಕಂತೆ ಪುರಾಣದಂತಿದೆ. 

ರಾಮ, ಜನಕ ಮಹಾರಾಜರನ್ನು ಐತಿಹಾಸಿಕ ವ್ಯಕ್ತಿಗಳನ್ನಾಗಿ ಮಾಡುವ ಯತ್ನ
8ನೇ ತರಗತಿಯ ಪಠ್ಯ-ಪುಸ್ತಕದ ಅಧ್ಯಾಯ 3- 'ಭಾರತದ ಪ್ರಾಚೀನ ನಾಗರೀಕತೆಗಳು' ಎಂಬ ಪಾಠದಲ್ಲಿ (ಪುಟ15)  ನಂತರದ ವೇದಗಳ ಕಾಲ ಎಂಬ ಶೀಷರ್ಿಕೆಯಡಿ ಇರುವ ಭಾಗದಲ್ಲಿ ಇರುವ  ವಾಕ್ಯಗಳು ಹೀಗಿವೆ. ನಂತರದ ದಿನಗಳಲ್ಲಿ ಆರ್ಯರು ಗಂಗಾನದಿಯ ಪೂರ್ವ ಪ್ರದೇಶಗಳಾದ ಉತ್ತರದ ಕೋಸಲ ಹಾಗೂ ವಿದೇಹದಲ್ಲಿ ಬಂದು ನೆಲೆಸಿದರು. ಈ ಪ್ರದೇಶಗಳು ರಾಮ ಹಾಗೂ ಜನಕ ಮಹಾರಾಜರಿಂದ ಖ್ಯಾತಿಯನ್ನು ಪಡೆದವು. ಬುದ್ಧನ ಕಾಲಕ್ಕಾಗಲೇ ಜನಕನ ವಿದೇಹ ಹಾಗೂ ಅವನ ರಾಜಧಾನಿ ಮಿಥಿಲ ತನ್ನ ಹಿಂದಿನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತ್ತು... 
  ಬುದ್ಧನಂತಹ ಐತಿಹಾಸಿಕ ವ್ಯಕ್ತಿಯ ಜೊತೆ ಸೇರಿಸಿ ರಾಮನನ್ನೂ ಕೂಡ ಐತಿಹಾಸಿಕ ವ್ಯಕ್ತಿಯನ್ನಾಗಿಸುವ ತಂತ್ರಗಾರಿಕೆ ಇಲ್ಲಿ ಸ್ಪಷ್ಟವಾಗಿದೆ. ಬಾಬರೀ ಮಸೀದಿ- ರಾಮ ಮಂದಿರದ ವಿವಾದವನ್ನು ಬಡಿದೆಬ್ಬಿಸಿ ದೇಶದಲ್ಲಿಸಂಘ-ಪರಿವಾರ ನಡೆಸಿದ ರಕ್ತಪಾತದ ರಾಜಕಾರಣದ ಹಿನ್ನೆಲೆಯಲ್ಲಿಈ ಪ್ರಶ್ನೆಯ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. 
ಇಲ್ಲಿ ಕೊಡಲಾಗಿರುವ ಉದಾಹರಣೆಗಳು ಕೆಲವು ಮಾತ್ರ. ಸಾಮಾಜಿಕ ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಲ್ಲಿ ಹಲವು ಗಂಭೀರವಾದ ವಿಕೃತಿಗಳು ಪಠ್ಯ-ಪುಸ್ತಕಗಳಲ್ಲಿ ಸೇರಿಬಿಟ್ಟಿವೆ. ಮೂಲಭೂತವಾಗಿ ಇತಿಹಾಸ ಹಾಗೂ ಸಮಾಜವನ್ನು ನೋಡುವ ದೃಷ್ಟಿಕೋನವೇ ದೋಷಪೂರಿತವಾಗಿದೆ. ಸಂಘ ಪರಿವಾರದ ಮತಾಂಧ, ಜಾತಿವಾದಿ, ಹಗೂ ಸಮಾಜದ ಆಳುವ ವರ್ಗದ ಪರವಾದ ದೃಷ್ಟಿಕೋನದಿಂದ ವಿಚಾರಗಳನ್ನು ನಿರೂಪಿಸಿ ರುವುದರಿಂದ ಇಡೀ ಪಠ್ಯವನ್ನೇ ಪುನರ್ ರೂಪಿಸಬೇಕಾದ ಅಗತ್ಯವಿದೆ. 8ನೇ ತರಗತಿಯ ಪಠ್ಯದಲ್ಲಿ ಹಲವು ವಿಕೃತಿಗಳನ್ನು ಸರಿಪಡಿಸಲು ಪ್ರಯತ್ನಿಸಿರುವುದು ಕಂಡು ಬರುತ್ತದೆಯಾದರೂ ಗಂಭೀರವಾದ ಕೆಲವು ವಿಕೃತಿಗಳು ಹಾಗೇ ಉಳಿದುಕೊಂಡಿವೆ. 5ನೇ ತರಗತಿಯ ಪಠ್ಯದಲ್ಲಂತೂ ವಿಕೃತಿ, ವಿಷಪೂರಿತ ವಿಚಾರಗಳು ಪಠ್ಯದುದ್ದಕ್ಕೂ ಹಾಸು ಹೊಕ್ಕಾಗಿದೆ. 
ಜಾತಿಯ ಕ್ರೌರ್ಯವನ್ನು ಮರೆಮಚುವ ಯತ್ನ.
ಜಾತೀಯತೆ ಎಂದರೆ ಜಾತಿಯ ಕುರಿತು ಅತೀವ ನಿಷ್ಠೆ ಎನ್ನಬಹುದು  ಎನ್ನುತ್ತದೆ ಈ ಪಠ್ಯ. ಅಂದರೆ ಜಾತೀಯತೆ ಎಂದರೆ ಮೇಲು ಕೀಳು ಎಂಬ ಭಾವನೆಗಳ ಆಧಾರದಲ್ಲಿ ನಿದರ್ಿಷ್ಟ ಜನ ಸಮುದಾಯಗಳನ್ನು ತುಳಿಯುವ ' ಶೋಷಿಸುವ ಒಂದು ಅಸಮಾನ-ಅಮಾನವೀಯ ಸಾಮಾಜಿಕ ವ್ಯವಸ್ಥೆ ಎಂಬುದನ್ನು ಪಠ್ಯವು ಮರೆ ಮಾಚಲು ಪ್ರಯತ್ನಿಸುತ್ತದೆ. ಅದರಿಂದಾಗಿಯೇ `ಗುಪ್ತರ ಕಾಲ - ಒಂದು ಸುವರ್ಣ ಯುಗ' ಎನ್ನುತ್ತದೆ ಈ ಪಠ್ಯ. ವೇದ ಕಾಲದ ನಂತರ ಚಾತುರ್ವರ್ಣ ವ್ಯವಸ್ಥೆ ಬಲಗೊಂಡ ಅಂಶ ಮುಂದೆ ಮೌರ್ಯ ಮತ್ತು ಗುಪ್ತರ ಕಾಲ ಘಟ್ಟಗಳಲ್ಲಿ ಅಸ್ಪೃಶ್ಯತೆ ಜಾತಿ ದಮನಗಳು ಸಾಂಸ್ಥಿಕ ಸ್ವರೂಪವನ್ನು ಪಡೆದುಕೊಂಡವು. ಕರಾಳ ಜಾತಿವಾದಿ ಕಟ್ಟಳೆಗಳನ್ನು ಸಮಾಜದ ಮೇಲೆ ಹೇರಿದ ಮನುಸೃತಿಯು ಈ ಹಂತದಲ್ಲಿಯೇ ಕ್ರೋಢೀಕರಣಗೊಂಡಿತು ಎಂಬ ಐತಿಹಾಸಿಕ ಸತ್ಯವನ್ನು ಮರೆಮಾಚಿ ಗುಪ್ತರ ಕಾಲವನ್ನು ಸುವರ್ಣ ಯುಗ ಎಂದು ಹೇಳಲಾಗುತ್ತಿದೆ. ಇಂತಹ ಮನೋಭಾವದ ಕಾರಣಕ್ಕಾಗಿಯೇ ವಚನ ಚಳುವಳಿ ಎಂದರೆ ಏನೋ ಒಂದು ಎರಡು ವಾಕ್ಯದಲ್ಲಿ ಹೇಳಿ ಮುಗಿಸುವ ಒಂದು ಸಾಮಾನ್ಯ ಘಟನಾವಳಿ ಯಂತೆ. ವೈದಿಕ ಧರ್ಮ ಚಿಂತನೆ ಸಂಸ್ಕೃತಿಯನ್ನು ಉಗ್ರವಾಗಿ ಖಂಡಿಸಿ ಸರಸಗಟಾಗಿ ತಿರಸ್ಕರಿಸಿ ಹೊಸದೊಂದು ಸಮಾಜದ ಕನಸಿನೊಂದಿಗೆ ಬೃಹತ್ ಆಂದೋಲನವನ್ನೇ ಆರಂಭಿಸಿದ ವಚನ ಚಳುವಳಿಯ ಪ್ರಣಾಳಿಕೆಯೇ ಈ ಪಠ್ಯದಲ್ಲಿ ಮಾಯವಾಗಿದೆ. ವೈದಿಕ ಸಂಸ್ಕೃತಿಯನ್ನು ಕೊಂಡಾಡುವಾಗಿನ ಸಂಭ್ರಮ ವಚನ ಚಳುವಳಿಯನ್ನು ಕುರಿತು ಇಲ್ಲ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇನ್ನೂ ಬೇಕಾದಷ್ಟು ಹೇಳಬಹುದು.

ವಿದೇಶಿಯರ ಬಗೆಗೆ ಸಂಶಯ ಬಿತ್ತನೆ
ವಿದ್ಯಾರ್ಥಿಗಳನ್ನು ಸಂಘ ಸಾಹಿತ್ಯದೆಡೆಗೆ ಸೆಳೆಯುವ ಸಂಚು
8ನೇ ತರಗತಿಯ ಕರಡು ಪಠ್ಯದಲ್ಲಿನ ಆಧ್ಯಾಯ -2 ಪಾಠ` ಪೌರ ಮತ್ತು ಪೌರತ್ವ' ದಲ್ಲಿ ಇದ್ದ ಈ ಒಂದು ಅಂಶವನ್ನು ನೋಡಿ.  ಪೌರತ್ವ ಮತ್ತು ಪೌರತ್ವ ಪಡೆಯುವ ವಿಧಾನ ಎಂಬ ಶೀರ್ಷಿಕೆ ಅಡಿಯಲ್ಲಿ  ಒಂದೆಡೆ ` ಭಾರತದಲ್ಲಿ ಪೌರತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳು ದೇಶವು 1947 ರಲ್ಲಿ ವಿಭಜನೆಯಾದಾಗಿನಿಂದ ಹಾಗೂ ನೆರೆ ದೇಶಗಳಾದ ಬಾಂಗ್ಲಾ, ಶ್ರೀಲಂಕಾಗಳಿಂದ ನಿಯಮ ಬಾಹಿರವಾಗಿ ವಲಸೆ ಬರುವವರಿಂದ ಉದ್ಭವಗೊಂಡಿವೆ.' ಎನ್ನುತ್ತದೆ.  ಈ  ವಿವರಣೆಯ ನಂತರ  ಪಾಠದ ಕೊನೆಯಲ್ಲಿ  ವಿದ್ಯಾರ್ಥಿಗಳನ್ನು ಚಟುವಟಿಕೆಗಳಿಗೆ ಪ್ರೇರೇಪಿಸುವ ಭಾಗದಲ್ಲಿ  ನೀಡಲಾಗಿರುವ  ಸೂಚನೆ (ನಂ.2) ನೋಡಿ.   `` ಪೋಲಿಸ್ ಠಾಣೆಯೊಂದಕ್ಕೆ ಭೇಟಿ ನೀಡಿ ಉನ್ನತ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿ ಭಾರತದಲ್ಲಿ ವಿದೇಶಿಯರು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಹಾಗೂ ಅವರನ್ನು ಶಿಕ್ಷಿಸುವಲ್ಲಿ ಪೋಲಿಸ್ ಇಲಾಖೆಗೆ ಇರುವ ಮಿತಿಗಳ ಬಗ್ಗೆ ಚರ್ಚಿಸಿ. (ಮಾಹಿತಿಯನ್ನು ದಿನ ಪತ್ರಿಕೆ, ನಿಯತಕಾಲಿಕೆಗಳ ಅಥವಾ ಅಂರ್ತಜಲದಿಂದ ಸಂಗ್ರಹಿಸಿಕೊಳ್ಳಿ)''
ಇದು ಸ್ವಷ್ಟವಾಗಿ ದೇಶ ವಿಭಜನೆಯ ಕಾಲದಲ್ಲಿ ಬಾಂಗ್ಲಾ ದೇಶದಿಂದ  ಬದುಕು ಹುಡುಕಿಕೊಂಡು ಭಾರತಕ್ಕೆ ಬಂದಿರುವ ಬಡ ಮುಸ್ಲೀಮರನ್ನು ಗುರಿ ಮಾಡಲು ಪ್ರಚೋದನೆ. ನಿಜ ಭಾರತಕ್ಕೆ  ಕಾನೂನು ಬಾಹಿರವಾಗಿ ಯಾರೇ ಆದರೂ ನುಸುಳುವುದನ್ನು ತಡೆಯಬೇಕು. ಆದರೆ ಆ ಹೆಸರಿನಲ್ಲಿ ಈ ಕುರಿತ ಸಂಘ ಪರಿವಾರದ ದ್ವೇಷಪೂರಿತ ಸಾಹಿತ್ಯದ ಕಡೆಗೆ ಅಂದರೆ ಸಂಘ ಪ್ರೇರಿತ ಪತ್ರಿಕೆಗಳು , ವೆಬ್ಸೈಟುಗಳ ಕಡೆಗೆ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನ ಇಲ್ಲಿದೆ. ಪಠ್ಯ ರಚನಾ ಸಮಿತಿಯೊಳಗೇ ಬಂದಿರುವ ಆಕ್ಷೇಪಣೆಯಿಂದಾಗಿ ಈ ಅಂಶವನ್ನು ಅಂತಿಮ ಕರಡಿನಲ್ಲಿ ತೆಗೆಯಲಾಗಿದೆ. ವಿದೇಶಿಯರ ಬಗೆಗೆ ಸಂಶಯವನ್ನು ಬಿತ್ತುವ, ಪೋಲಿಸ್ ಇಲಾಖೆಯನ್ನೂ ಕೋಮುವಾದೀಕರಿಸಲು ಪ್ರೇರೇಪಿಸುವ ಸಂಘ ಪರಿವಾರದ ಆಲೋಚನೆಯನ್ನು ಈ ಮೂಲಕ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಹೀಗೆ 5 ನೇ ತರಗತಿಯ ಹರ್ಷವರ್ಧನನ ಕುರಿತ ಪಾಠದ ಕೊನೆಯಲ್ಲಿ `ಚಟುವಟಿಕೆಗಳು'ಎಂಬ ಶೀರ್ಷಿಕೆಯಲ್ಲಿ ``ಹರ್ಷವರ್ಧನ ಮತ್ತು ಇಮ್ಮಡಿ ಪುಲಿಕೇಶಿಯ ಜೀವನ ಚರಿತ್ರೆಯನ್ನು ಓದಿ. (ಆಕರ:ಭಾರತ_ಭಾರತಿ ಪುಸ್ತಕ ಸಂಪದ) ಎಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಇದು ರಾಷ್ಟ್ರೋತ್ಥಾನದ ಪ್ರಕಟಣೆ. ಹೇಗಿದೆ ವಿದ್ಯಾರ್ಥಿಗಳನ್ನು ಆರೆಸ್ಸೆಸ್ನ ಮತಾಂಧ ಸಾಹಿತ್ಯದೆಡೆಗೆ ತಳ್ಳುವ ಸಂಚು.  
                                                                                                           -ಆರ್.ರಾಮಕೃಷ್ಣ

2 comments:

  1. ಅರ್ಟಿಕಲ್ ತುಂಬಾ ಚೆನ್ನಾಗಿದೆ,ವಿಷಯವು ಚಿಂತಕರ ಮನ ಮುಟ್ಟುವಂತಿದೆ ನಿರಂತರ ಅವಿಷ್ಮಾರಕ್ಕೆ ನನ್ನ ಶುಭಾಶಯಗಳು.

    ReplyDelete
    Replies
    1. ದನ್ಯವಾದಗಳು, ಎಲ್ಲರ ಸಹಕಾರದಿಂದ ಸಮಾಜದ ಇಂದಿನ ಪರಿಸ್ಥಿತಿಗೆ ಕಾರಣಗಳನ್ನು ನಿರಂತರವಾಗಿ ಅವಿಷ್ಕರಿಸುತ್ತಾ ಅವುಗಳನ್ನು ಬದಲಾಯಿಸಿ ಉತ್ತಮ ಸಮಾಜವನ್ನು ನಿರ್ಮಿಸೋಣ.

      Delete