ಅತ್ಯಾಚಾರಗಳು ಆತಂಕವನ್ನು ಮೂಡಿಸುತ್ತಿವೆ.
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ಪ್ರಕರಣಗಳನ್ನು ಗಮನಿಸಿದರೆ, ನಾವುಗಳು ಎಂತಹ ಅನಾಗರೀಕತೆ ಎಡೆಗೆ ಹೋಗುತ್ತಿದ್ದೇವೆಂದು ಅನಿಸುತ್ತಿದೆ. ಇಷ್ಟು ಮಾತ್ರವಲ್ಲದೆ, ಅತ್ಯಾಚಾರವನ್ನು ಮಾಡಿದ ಅನಾಗರೀಕರ ಕ್ರೋರ ಮನಸ್ಥಿತಿಯ ಬಗ್ಗೆ ಸಿಟ್ಟು ಬರುವ ಜೊತೆಗೆ ಅವರನ್ನು ಅಂತಹ ಸ್ಥಿತಿಗೆ ತಳ್ಳಿದ ಇಂದಿನ ಮಾಧ್ಯಮಗಳು (ನಿರಂತರವಾಗಿ ಟಿ.ಆರ್.ಪಿ ಗಾಗಿ ಹೆಚ್ಚೆಚ್ಚು ಸೆಕ್ಸ್ ಮತ್ತು ಕ್ರೈಮ ವಿಚಾರಗಳನ್ನೇ ತೋರಿಸುತ್ತಾರೆ) ಸಿನೇಮಾ, ನಮ್ಮ ಶಿಕ್ಷಣದ ವ್ಯವಸ್ಥೆ ಮತ್ತು ನಮ್ಮ ಸುತ್ತ ಮುತ್ತಲಿರುವ ಪರಿಸರುವೂ ಮುಖ್ಯ ಕಾರಣ ಎಂದೆನಿಸುತ್ತದೆ. ಹಾಗಾಗಿ ಅತ್ಯಾಚಾರದ ವಿರುದ್ದ ಮಾತನಾಡುವಾಗ ತಪಿತಸ್ಥರಿಗೆ ಕಠಿಣ ಶಿಕ್ಷೆ ಯಾಗುವಂತೆ ಕಾನೂನು ಜಾರಿಗೆ ಬರ ಬೇಕೆಂದು ಒತ್ತಾಯಿಸುವಾಗಲೇ ಒಟ್ಟು ವಾತಾವರಣವನ್ನು ಬದಲಾಯಿಸುವ ಆಮೂಲಕ ಇಂತಹ ವಿಕೃತ ಮನಸ್ಥಿತಿಯಿಂದ ಇಂದಿನ ಯುವಜನರನ್ನು ಹೊರತರದಿದ್ದರೆ ಇಂತಹ ಘಟನೆಗಳಿಗೆ ಅಂತ್ಯವೇ ಇರುವುದಿಲ್ಲ.
No comments:
Post a Comment